Posts

ಕಾಜೂರು ಆಡಳಿತ ಮಂಡಳಿಯಿಂದ ಜಮಾಅತ್ ನಲ್ಲಿ ವೇಕ್ಸಿನೇಷನ್ ಅಭಿಯಾನ

1 min read

409 ಮಂದಿಗೆ ಕೋವಿಶೀಲ್ಡ್ ವೇಕ್ಸಿನ್

ಬೆಳ್ತಂಗಡಿ: ರಹ್ಮಾನಿಯ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಕಾಜೂರು ಆಡಳಿತ ಸಮಿತಿಯ ವತಿಯಿಂದ



ಮಿತ್ತಬಾಗಿಲು ಗ್ರಾಮ ಪಂಚಾಯತ್  ಹಾಗೂ  ಪ್ರಾಥಮಿಕ  ಆರೋಗ್ಯ ಕೇಂದ್ರ ಇಂದಬೆಟ್ಟು ಇದರ  ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಜಮಾಅತ್ ನ ಎಲ್ಲರಿಗೂ ಅನುಕೂಲವಾಗುವಂತೆ ಪ್ರಥಮ ಹಂತದ ವೇಕ್ಸಿನೇಷನ್  ಅಭಿಯಾನ ಶನಿವಾರ ಯಶಸ್ವಿಯಾಗಿ ಸಂಘಟಿಸಲಾಗಿತ್ತು.

ಕಾಜೂರು ರಹ್ಮಾನಿಯ ಪ್ರೌಢಶಾಲೆಯಲ್ಲಿ ಈ  ಶಿಬಿರ ಆಯೋಜಿಸಾಲಾಗಿತ್ತು. 

ಈ ಶಿಬಿರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಟೋಕನ್ ವಿತರಿಸಿ  ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಮೊದಲ ವರಸೆ  ಪೂರೈಸಿರುವ ವ್ಯಕ್ತಿಗಳಿಗೆ ಎರಡನೇ ವರಸೆಯ ಲಸಿಕೆಯನ್ನೂ ಈ ಸಂದರ್ಭದಲ್ಲಿ ನೀಡಲಾಯಿತು. 

ಈ ಸಮಯದಲ್ಲಿ ಮಿತ್ತಬಾಗಿಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿನಯಚಂದ್ರ ಸೇನೆರೆಬೊಟ್ಟು, ಗ್ರಾ.ಪಂ ಸದಸ್ಯ ಅಹ್ಮದುಲ್ ಕಬೀರ್ ಕಾಜೂರು, ಮಲವಂತಿಗೆ ಗ್ರಾ.ಪಂ ಸದಸ್ಯ ಕೆ.ಯು ಮುಹಮ್ಮದ್ ಸಹಿತ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು, ಇಂದಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಮುಖ್ಯಧಿಕಾರಿಗಳು ಮತ್ತು ಸಹಾಯಕರು, ದಾಧಿಯರು, ಆಶಾ ಕಾರ್ಯಕರ್ತರು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಅನುಷ್ಟಾನದಲ್ಲಿ ಪಾತ್ರವಹಿಸಿದರು.









ಈ ಸಂದರ್ಭದಲ್ಲಿ ಕಾಜೂರು ದರ್ಗಾ ಸಮಿತಿ ಅಧ್ಯಕ್ಷ ಕೆ. ಯು ಇಬ್ರಾಹಿಂ ಮಾತನಾಡಿ, ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಿದ್ದು ,‌ಇದು ಜಮಾಅತ್ ಮಟ್ಟದಲ್ಲಿ ನಡೆದ‌ ಮೊದಲ ಕಾರ್ಯಕ್ರಮ. ವೇಕ್ಸಿನ್ ಬಗ್ಗೆ ಸಮುದಾಯದಲ್ಲಿರುವ ಸಂದೇಹವನ್ನು ನಿವಾರಿಸಿ ಮುಂದಕ್ಕೆ ನಮ್ಮ ಜಮಾಅತ್ ಸಂಪೂರ್ಣ ವೇಕ್ಸಿನೇಟೆಡ್ ಜಮಾಅತ್ ಎಂದು ಘೋಷಿಸುವ ಭರವಸೆ ಇದೆ ಎಂದರು.

ಕೊನೆಯಲ್ಲಿ ಕಾಜೂರು ಪ್ರಧಾನ ಧರ್ಮಗುರುಗಳಾದ ಸಯ್ಯದ್  ಕಾಜೂರ್ ತಂಙಳ್ ಅವರು ಇಂದಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಇಲಾಖೆ ಸಿಬ್ಬಂದಿ ರಕ್ಷಿತ್ ರವರಿಗೆ ಮತ್ತು ಪಂಚಾಯತ್ ಸದಸ್ಯ ಕೆ ಶಾಹುಲ್ ಹಮೀದ್ ಅವರನ್ನು ಅಭಿನಂದಿಸಿದರು.

ಶಿಬಿರ ಆಯೋಜನೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆಚಾವಡಿ, ಕೋಶಾಧಿಕಾರಿ ಕೆ.ಎಮ್‌ ಕಮಾಲ್ ಹಾಗೂ ಇತರ  ಸದಸ್ಯರು, ಅಧೀನ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿಗಳು ಸಹಕರಿಸಿದರು.

ದರ್ಗಾ ಪ್ರಧಾನ ಕಾರ್ಯದರ್ಶಿ‌ ಜೆ.ಹೆಚ್ ಅಬೂಬಕ್ಕರ್ ಸಿದ್ದಿಕ್ ವಂದನಾರ್ಪಣೆಗೈದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment