Posts

SSF ಉಜಿರೆ ಸೆಕ್ಟರ್ ಅರ್ಧ ವಾರ್ಷಿಕ ಸಭೆ.


ಉಜಿರೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಇದರ ಅರ್ಧ ವಾರ್ಷಿಕ ಸಭೆಯು ದಿನಾಂಕ : 25 ಆಗಸ್ಟ್  2021 ಬುಧವಾರ ಮಗ್ರಿಬ್ ನಮಾಝಿನ ಬಳಿಕ ಸೆಕ್ಟರ್ ಅಧ್ಯಕ್ಷರಾದ ಅನ್ಸಾರ್ ಸ‌ಅದಿ ಮಾಚಾರುರವರ ಅಧ್ಯಕ್ಷತೆಯಲ್ಲಿ ಮಸ್ಲಕ್ ಮುಂಡಾಜೆ ಮದರಸ ಹಾಲ್‌ನಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಸ್ಲಕ್ ಮಸ್ಜಿದ್ ಮುಂಡಾಜೆಯ ಖತೀಬರಾದ ಬಹು| ಉನೈಸ್ ಸಖಾಫಿಯವರು ನೆರವೇರಿಸಿದರು. ಮುಅಲ್ಲಿಂರಾದ ಜಲೀಲ್ ಸಖಾಫಿ ಶುಭಹಾರೈಸಿದರು.


ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ಪ್ರ.ಕಾರ್ಯದರ್ಶಿ ಬಾಸಿತ್ ಹಿಮಮಿ ಸಖಾಫಿ, ಬೆಳಾಲು ವರದಿಯನ್ನು ಹಾಗೂ ಕೋಶಾಧಿಕಾರಿ ಅಬ್ದುಲ್ ಮಜೀದ್ ಅತ್ತಾಜೆ ಲೆಕ್ಕಪತ್ರವನ್ನು ಮಂಡಿಸಿದರು.

ಎಸ್ಸೆಸ್ಸೆಫ್ ದ.ಕ ಜಿಲ್ಲೆ ಈಸ್ಟ್ ಸದಸ್ಯ, ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಅಬ್ದುಲ್ ರಶೀದ್ ಮದನಿ ಇಂದಬೆಟ್ಟು ತರಗತಿಯನ್ನು ಮಂಡಿಸಿದರು.

ವೀಕ್ಷಕರಾಗಿ ಎಸ್ಸೆಸ್ಸೆಫ್ ದ.ಕ ಜಿಲ್ಲೆ ಈಸ್ಟ್ ಸದಸ್ಯ, ಬೆಳ್ತಂಗಡಿ ಡಿವಿಷನ್ ಕಾರ್ಯದರ್ಶಿ ಶರೀಫ್ ನಾವೂರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲೆ ಈಸ್ಟ್ ಕಾರ್ಯದರ್ಶಿ ಬೆಳ್ತಂಗಡಿ ಡಿವಿಷನ್ ಸದಸ್ಯ ಇಕ್ಬಾಲ್ ಮಾಚಾರು, ಬೆಳ್ತಂಗಡಿ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಮುಹಮ್ಮದ್ ಮುಬೀನ್ ಉಜಿರೆ, ಸದಸ್ಯ ಹಕೀಂ ಕಕ್ಕಿಂಜೆ ಹಾಗೂ ಸೆಕ್ಟರ್ ಸಮಿತಿ ಸದಸ್ಯರುಗಳು ಹಾಗೂ ಎಸ್ಸೆಸ್ಸೆಫ್ ಉಜಿರೆ ಸೆಕ್ಟರ್ ವ್ಯಾಪ್ತಿಯ ಎಲ್ಲಾ ಯುನಿಟ್‌ನ ಪದಾಧಿಕಾರಿಗಳು ಹಾಗೂ ಕೌನ್ಸಿಲರ್‌ಗಳು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official