ಬೆಳ್ತಂಗಡಿ: ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ, ಲಾಯಿಲ ನಿವಾಸಿ ಸಂತೋಷ್ ಕುಮಾರ್ (45ವ.) ಅವರು ಶನಿವಾರ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದರು. ಆರಂಭದಲ್ಲಿ ಚಾಪೆಹಿಡಿದು ಮಲಗಿದ್ದ ಅವರು ಕೊಕ್ಕಡದ ಸೇವಾಧಾಮ ಬೆನ್ನುಮೂಳೆ ಮುರಿತಕ್ಕೊಳಗಾದವರ ಆರೈಕೆ ಕೇಂದ್ರದಿಂದ ಚಿಕಿತ್ಸೆ ಮತ್ತು ಫಿಸಿಯೋಥೆರಫಿ ಪಡೆದು ಚೇತರಿಸಿಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದರು.
ಆರಂಭದಲ್ಲಿಉಜಿರೆ ಬೆಳ್ತಂಗಡಿ ಅಪೆ ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಯಾಗಿ, ಲಾಯಿಲ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ತಮ್ಮ ದೀರ್ಘಕಾಲಿಕ ಅನಾರೋಗ್ಯದಿಂದಲೇ ಬೇಸತ್ತು ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಕೃತ್ಯವೆಸಗಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.