Posts

ವಿದೇಶದಿಂದ ಮರಳಿದ್ದ ನೆರಿಯ ಗ್ರಾಮದ ಎರಡು ಮಕ್ಕಳ ತಾಯಿ ನಗದು ಮತ್ತು ಅಭರಣದ ಜೊತೆ ನಾಪತ್ತೆ

1 min read

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ;  ತಾಲೂಕಿನ ನೆರಿಯ ಗ್ರಾಮದ ಗೃಹಿಣಿ, ಎರಡು ಮಕ್ಕಳ ತಾಯಿ ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದವರು ಬೆಳಗಾಗುವುದರ ಮಧ್ಯೆ ಹಣ ಮತ್ತು ಒಡವೆಯೊಂದಿಗೆ ನಾಪತ್ತೆಯಾಗಿದ್ದಾರೆ. 

ರಾಜಿ ರಾಘವನ್ (39)ಈ ಕುರಿತು ಅವರ ಪತಿ ಚಿದಾನಂದ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.

ವಿದೇಶದಲ್ಲಿ ಕೆಲಸಕ್ಕಿದ್ದ  ರಾಜಿ ಜು.11ರಂದು ನೆರಿಯದ ನಾಯಿಕಟ್ಟೆ ಎಂಬಲ್ಲಿರುವ ಪತಿಯ ಮನೆಗೆ ಮರಳಿದ್ದರು. ಆದರೆಆ. 26ರಂದು ರಾತ್ರಿ ಬಳಿಕ ಕಾಣೆಯಾಗಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ಆಕೆ ರಾತ್ರಿ ಎಂದಿನಂತೆ ಪತಿಯ ಜೊತೆ ಮಲಗಿದ್ದವರು 11 ಗಂಟೆಯ ಸುಮಾರಿಗೆ ಆಚೆ ಕೋಣೆಯಲ್ಲಿ ಮಲಗಿದ್ದ ಮಗಳ ಜೊತೆ ಮಲಗುವುದಾಗಿ ಹೇಳಿ ಎದ್ದು ಹೋಗಿದ್ದರು. ಆದರೆ ಬೆಳಿಗ್ಗೆ ಐದು ಗಂಟೆಗೆ ಮಗಳು ಎದ್ದು ನೋಡುವ ವೇಳೆ ತಾಯಿ ತನ್ನ ಬಳಿಯೂ ಮಲಗಿರದೆ, ಮನೆಯಲ್ಲೇ ಇಲ್ಲದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ರಾಜೀ -ಚಿದಾನಂದ ದಂಪತಿಗೆ 11 ವರ್ಷದ ಹೆಣ್ಣು ಮಗಳು, 10 ವರ್ಷದ ಗಂಡು ಮಗ ಇದ್ದು ಇದೀಗ ಆಕೆ ನಾಪತ್ತೆಯಾಗಿದ್ದಾರೆ.

ಪತಿ ನೀಡಿದ ದೂರಿನಲ್ಲಿ ಆಕೆ ಮನೆಯಿಂದ ಹೊರಹೋಗುವಾಗ ತಾಯಿ ಬ್ಯಾಂಕಿನಿಂದ ಸಾಲ‌ಪಡೆದು ತಂದ 1 ಲಕ್ಷ ರೂ. ವಿನಲ್ಲಿ ಉಳಿಕೆ ಇಟ್ಟಿದ್ದ 95000 ಹಾಗೂ ತನ್ನ ತಾಯಿಯ ಎರಡು ಚಿನ್ನದ ಬಳೆಗಳನ್ನೂ ತೆಗೆದುಕೊಂಡು  ಹೋಗಿದ್ದಾರೆ ಎಂದು ಆಪಾದಿಸಿದ್ದಾರೆ.

ಬಲ್ಲ ಮೂಲಗಳಿಂದ ಸಿಕ್ಕಿದ ಮಾಹಿತಿಯಂತೆ ವಿದೇಶದಲ್ಲಿ ಆಕೆಗೆ ಸಂಬಂಧವೊಂದು ಇದೆ ಎಂಬ ಶಂಕೆ ಇದ್ದು, ಈ ಬಗ್ಗೆ ಇತ್ತೀಚೆಗೆ ಪಂಚಾತಿಕೆ ಕೂಡ ಆಗಿತ್ತು ಎನ್ನಲಾಗಿದೆ.  ಒಟ್ಟಾರೆ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಆಕೆ ಮನೆಬಿಟ್ಟು ಹೋಗಿದ್ದು ನಾಪತ್ತೆ ದೂರು ದಾಖಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment