ಬೆಳ್ತಂಗಡಿ; 4 ದಶಕಗಳ ಸಾರ್ಥಕ ಸೇವೆಯೊಂದಿಗೆ ಜನರ ವಿಶ್ವಾಸ ಮತ್ತು ನಂಬಿಕೆ ಗಳಿಸಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಮಳಿಗೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಬೃಹತ್ ಪ್ರದರ್ಶನ- ಮಾರಾಟಕ್ಕೆ ಆ.16 ರಂದು ಚಾಲನೆ ದೊರೆತಿದೆ.
ತಾಲೂಕು ಬ್ಯೂಟಿ ಪಾರ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷೆ ಹಾಗೂ ಎಪಿಎಂಸಿ ಉಪಾಧ್ಯಕ್ಷೆ ಪಲ್ಲವಿ ರಾಜು ನಾಯ್ಕ್, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಶಾಂತಾ ಜೆ ಬಂಗೇರ, ಮುಂಡಾಜೆ ರೋಟರಿ ಸಮುದಾಯದಳದ ನಿಕಟಪೂರ್ವ ಅಧ್ಯಕ್ಷೆ ಹಾಗೂ ಗ್ರಾ.ಪಂ ಮಾಜಿ ಸದಸ್ಯೆ ಅಶ್ವಿನಿ ಅರವಿಂದ್ ಹೆಬ್ಬಾರ್ ಮುಖ್ಯ ಅತಿಥಿಯಾಗಿದ್ದರು.
ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಉಮಾನಾಥ ಪ್ರಭು, ಹಾಗೂ ಸಿಬ್ಬಂದಿಗಳಾದ ಪ್ರಮೀಳಾ ಶೆಟ್ಟಿ, ರಕ್ಷಾ, ಮಮತಾ ಹಾಗೂ ಇತರರ ಉಪಸ್ಥಿತರಿದ್ದರು. ಮಾರ್ಕೆಟಿಂಗ್ ಎಕ್ಸ್‌ಕ್ಲೂಟಿವ್
ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದರು.