Posts

'ಸಹಾಯ್' ತಂಡದಿಂದ ಮಿಂಚಿನಡ್ಕದಲ್ಲಿ ಮಿಂಚಿನ ಕಾರ್ಯಾಚರಣೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರ 10 ನಿಮಿಷದಲ್ಲಿ ತೆರವು

0 min read

ಬೆಳ್ತಂಗಡಿ; ಗುರುವಾಯನಕೆರೆ ಯಿಂದ  ಪಣೆಜಾಲಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಮೇಲೆ ಶುಕ್ರವಾರ ಮಧ್ಯಾಹ್ನ ಭಾರೀ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಮುರಿದುಬಿದ್ದು ಸಂಚಾರಕ್ಕೆ ಅಡ್ಡಿಯಾದಾಗ ಬೆಳ್ತಂಗಡಿ ತಾಲೂಕಿನ "ಸಹಾಯ್" ತಂಡದ ತುರ್ತುಸೇವಾ ಕಾರ್ಯಕರ್ತರು ಮಿಂಚಿನ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿದರು.





ಈ‌ ಕಾರ್ಯಾಚರಣೆಯಲ್ಲಿ ತಾ. ಮಾನವ ಸ್ಪಂದನದ ಕಾರ್ಯಕರ್ತ ಸಿದ್ಧಿಕ್ ಪರಪ್ಪು, ಎಸ್‌ವೈಎಸ್, ಎಸ್ಸೆಸ್ಸೆಫ್, ಕರ್ನಾಟಕ ಮುಸ್ಲಿಂ ಜಮಾಅತ್, "ಸಹಾಯ್'" ತಂಡದ ಕಾರ್ಯಕರ್ತರಾದ ಫಯಾಝ್ ಗೇರುಕಟ್ಟೆ, ಬಷೀರ್ ಎಸ್‌ಎಮ್‌ಎಸ್ ಗೇರುಕಟ್ಟೆ, ಹರ್ಷದ್, ಸಹದ್ ಗೇರುಕಟ್ಟೆ, ನೌಶಾದ್ ಗೇರುಕಟ್ಟೆ, ಅಶ್ರಫ್ ಗುರುವಾಯನಕೆರೆ, ಜಮಾಲುದ್ದೀನ್ ಲೆತೀಫಿ ಅಬ್ಬಾಸ್ ಕೊರಂಜ ಇವರು ಭಾಗಿಯಾದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment