ಮೃತ ಚಂದ್ರಾವತಿ
ಮಚ್ಚಿನ ಗ್ರಾಮದ ಮುಡಿಪಿರೆಯಲ್ಲಿ ಘಟನೆ
ಬೆಳ್ತಂಗಡಿ: ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆಂದು ಕಟ್ಟಿದ್ದ ಶಾಮಿಯಾನದ ಪೈಪಿಗೇ ಹಗ್ಗದಿಂದ ನೇಣು ಹಾಕಿಕೊಂಡು ಪತಿಯೋ ಆತ್ಮಹತ್ಯೆಗೈದುಕೊಂಡ ಘಟನೆ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿಂದ ವರದಿಯಾಗಿದೆ.
ಆರಂಭದಲ್ಲಿ ಪತ್ನಿ ಚಂದ್ರಾವತಿ (49.ವ) ಅವರು ಮನೆಯ ಪಕ್ಕದ ಗೇರುಮರಕ್ಕೆ ನೆಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮರುದಿನ ಅವರ ಪತಿ ಶಿವಪ್ಪ ಗೌಡ(56ವ.) ಎಂವಬರೂ ಇದೇ ಕೃತ್ಯವೆಸಗಿಕೊಂಡಿದ್ದಾರೆ.
ಆರಂಭದಲ್ಲಿ ಚಂದ್ರಾವತಿ ಅವರುಮನೆಯ ಜಾನುವಾರಿಗೆ ಹುಲ್ಲುತರಲೆಂದು ಮನೆಯಿಂದ ಮಧ್ಯಾಹ್ನ ಹೊರಹೋದವರು ಸಂಜೆಯವರೆಗೂ ಮರಳಿಬಾರದೇ ಇದ್ದುದರಿಂದ ಸಂದೇಹಗೊಂಡ ಮನೆಯವರು ಹುಡುಕಾಟ ನಡೆಸಿದ ಸಂದರ್ಭ ಅವರು ಆತ್ಮಹತ್ಯೆ ಗೈದುಕೊಂಡ ವಿಚಾರ ಬೆಳಕಿಗೆ ಬಂದಿತ್ತು. ಪತಿಗೆ ತೀವ್ರ ಕುಡಿತದ ಚಟ, ಪತಿಗೆ ವಾಸಿಯಾಗದ ದೀರ್ಘ ಕಾಲದ ಅಸೌಖ್ಯ ಮತ್ತು ಮಕ್ಕಳಾಗದೇ ಇರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಜೀವನ ಕೊನೆಗಾಣಿಸಿಕೊಂಡಿದ್ದರು.
ಮರುದಿನ ಆತ್ಮಹತ್ಯೆ ಮಾಡಿಕೊಂಡ ಪತಿ
ಅವರ ಅಂತ್ಯಸಂಸ್ಕಾರ ಶನಿವಾರ ನಡೆದಿತ್ತು. ಜೋರಾಗಿ ಮಳೆಇದ್ದುದರಿಂದ ಜಾಗಕ್ಕೆ ಶಾಮಿಯಾನ ಹಾಕಲಾಗಿತ್ತು.
ರಾತ್ರಿ 10 ಗಂಟೆಯಿಂದ ರವಿವಾರ ಬೆಳಿಗ್ಗೆ 6 ಗಂಟೆಯ ಮಧ್ಯದಲ್ಲಿ ಚಂದ್ರಾವತಿ ಅವರ ಪತಿ ಶಿವಪ್ಪ ಗೌಡ ಅವರು ಇದೇ ಚಪ್ಪರದ ಕಂಬಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಂಪತಿಯು ಮುಡಿಪಿರೆ ಎಂಬಲ್ಲಿ ತಾಯಿ ನಾಗಮ್ಮರೊಂದಿಗೆ ವಾಸ್ತವ್ಯವಿದ್ದರು. ಇದೀಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಸಧ್ಯಕ್ಕೆ ತಾಯಿ ಒಬ್ಬಂಟಿಯಾಗಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನಿನ ಪ್ರಕ್ರೀಯೆ ನಡೆದಿದೆ.