ಹಠ ಹಿಡಿದದ್ದಕ್ಕಾಗಿ ರಿಮಾಂಡ್ ಹೂಂ ಗೆ ಶಿಫ್ಟ್
ಬೆಳ್ತಂಗಡಿ: ತಾಲೂಕಿನ ಕನ್ಯಾಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದರಲ್ಲಿ ತನ್ನ ಅಕ್ಕನ ಗಂಡ ಬಾವನೊಂದಿಗೆ ಪರಾರಿಯಾಗಿದ್ದ ನಾದಿನಿ ಜೋಡಿ ಮಡಿಕೇರಿಯಲ್ಲಿ ಪತ್ತೆಯಾಗಿದ್ದಾರೆ.
ಆದರೆ ಯುವತಿ ನನಗೆ ಆತನೇ ಬೇಕು ಎಂಬುದಾಗಿ ಪಟ್ಟುಹಿಡಿದ ಕಾರಣಕ್ಕಾಗಿ, ಕಾನೂನಿನಡಿ ಅದು ಅವಕಾಶ ಇಲ್ಲದ್ದರಿಂದ ಆಕೆಯನ್ನು ಇದೀಗ ರಿಮಾಂಡ್ ಹೂಂ ಗೆ ಶಿಫ್ಟ್ ಮಾಡಲಾಗಿದೆ.
ಒಂಭತ್ತು ತಿಂಗಳ ಹಿಂದೆ ಯುವತಿ ರೈಹಾನಾ ಅವಳ ಅಕ್ಕನ ಜೊತೆ ಸಾಂಪ್ರದಾಯಿಕ ವಾಗಿ ವಿವಾಹ ಮಾಡಿಕೊಂಡಿದ್ದ ಮುಸ್ತಫಾ ಎಂಬಾತ ತಿಂಗಳೊಳಗೆಯೇ ನಾದಿನಿಯ ಪ್ರೀತಿ ಸಂಪಾದಿಸಿದ್ದ. ಆಕೆಯ ಜೊತೆಗೆ ಸಲುಗೆಯಿಂದಲೂ ಇದ್ದು ಅವಕಾಶ ದುರುಪಯೋಗಪಡಿಸಿಕೊಂಡಿದ್ದ. ಒಟ್ಟಾರೆ ವಿಚಾರವಾಗಿ ಪತಿ ಪತ್ನಿ ನಡುವೆ ವೈಮನಸ್ಯ ಉಂಟಾಗಿತ್ತು. ಸಣ್ಣ ಪುಟ್ಟ ಕಾರಣಕ್ಕೂ ಆರೋಪಿ ಮುಸ್ತಫಾ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದ.ಎಲ್ಲಾ ಬೆಳವಣಿಗೆಗಳ ನಂತರ ಪತ್ನಿ ಸೌಧಾ ಚಿನ್ನಾಭರಣದೊಂದಿಗೆ ತವರು ಮನೆ ಸೇರಿದ್ದಳು. ಈ ಮಧ್ಯೆ ನಾದಿನಿ ರೈಹಾನಾಳ ಸಖ್ಯ ಅತಿಯಾಗಿ ಇಬ್ಬರೂ ಊರು ಬಿಡುವ ಯೋಚನೆ ಮಾಡಿಕೊಂಡಿದ್ದರು.ಈಮಧ್ಯೆ ಅಕ್ಕ ತಂದಿಟ್ಟಿದ್ದ ಆಭರಣವನ್ನು ತಂಗಿ ರೈಹಾನಾ ಎಗರಿಸಿ ಅದನ್ನು ಬೆಳ್ತಂಗಡಿಯ ಫೈನಾನ್ಸ್ ವೊಂದರಲ್ಲಿ ಅಡವಿಟ್ಟು ಆ ಹಣವನ್ನು ಪ್ರಿಯಕರ ಬಾವನಿಗೆ ಕೊಟ್ಟಿದ್ದಳು. ಜೊತೆಗೆ ತಂದೆಯ ವ್ಯವಹಾರಕ್ಕೆ ಸಂಬಂಧಿಸಿದ65 ಸಾವಿರ ರೂಪಾಯಿಗಳನ್ನೂ ಆಕೆ ಕಳವುಗೈದಿದ್ದಳು ಎಂದು ಇದೀಗ ಬೆಳಕಿಗೆ ಬಂದಿದೆ.
ಇದ್ದಕ್ಕಿದ್ದಂತೆರೈಹಾನಾ ಬಾವನಜೊತೆ ಪರಾರಿಯಾಗಿರುವ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನೂ ಮಡಿಕೇರಿಯಲ್ಲಿ ಪತ್ತೆಹಚ್ಚಿದ್ದಾರೆ.
ಪಂಚಾತಿಕೆ ವೇಳೆ ಬಾವನ ಬಿಟ್ಟಿರಲಾರೆ ಎಂದ ನಾದಿನಿ;
ಠಾಣೆಯಲ್ಲಿ ಹೆತ್ತವರ ಸಮ್ಮುಖ ಪಂಚಾತಿಕೆ ನಡೆದ ವೇಳೆ , ತಾನು ಯಾವುದೇ ಕಾರಣಕ್ಕೂ ಬಾವ ಮುಸ್ತಫಾ ನನ್ನು ಬಿಟ್ಟಿರಲಾರೆ. ನಾನು ಜೀವಿಸುವುದಾದರೆ ಆತನ ಜೊತೆಗೆ ಮಾತ್ರ. ಇಲ್ಲದಿದ್ದರೆ ರಿಮಾಂಡ್ ಹೂಂ ಗೆ ಹೋಗಬಲ್ಲೆ. ತಂದೆ ತಾಯಿಯ ಜೊತೆ ಹೋಗಲಾರೆ. ತನ್ನ ಸ್ವಂತ ಇಚ್ಛೆಯಿಂದ ಆತನ ಜೊತೆಗೆ ಹೋಗಿದ್ದು ನನಗೆ ಆತನೇ ಬೇಕು ಎಂದು ಪಟ್ಟುಹಿಡಿದಿದ್ದಾಳೆ. ಆದರೆ ಅಕ್ಕ ಸೌಧಾ ಜೊತೆ ಮುಸ್ತಫಾ ವಿವಾಹವಾಗಿರುವುದರಿಂದ ತಂಗಿ ರೈಹಾನಾಳನ್ನು ಕಾನೂನಾಧಾರಿತವಾಗಿ ಕಳುಹಿಸಿಕೊಡುವ ಹಾಗಿಲ್ಲ.ಆದ್ದರಿಂದ ಅಂತಿಮವಾಗಿ ಪೋಲಿಸರು ಬುಧವಾರ ಸಂಜೆ ರೈಹಾನಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಅಲ್ಲೂ ಆಕೆ ಸಮಾನಹೇಳಿಕೆ ನೀಡಿದ್ದ ಕಾರಣಕ್ಕಾಗಿ ಆಕೆಯನ್ನು ಮಂಗಳೂರಿನ ರಿಮಾಂಡ್ ಹೋಂಗೆ ಕಳುಹಿಸಿ ಆದೇಶಿಸಿದ್ದಾರೆ.
ವಿಳಾಸವಿಲ್ಲದ ಮಧುಮಗ;
ವಿವಾಹದ ವೇಳೆ ಸರಿಯಾದ ವಿಳಾಸವಿಲ್ಲದ ಮುಸ್ತಫಾ ಇತ್ತ ಸೌಧಾ ಅವರ ತಂದೆಯನ್ನು ಯಾಮಾರಿಸಿದ್ದ.ಮದುವೆಯಾದ ಆರಂಭದಲ್ಲಿ ಆತ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ವಾಸವಾಗಿದ್ದ. ಬಳಿಕ ಮೆಲ್ಕಾರ್ ಗೆ ಶಿಫ್ಟ್ ಆಗಿದ್ದ. ಆಮೇಲೆ ಅಲ್ಲಿಂದ , ಕೋಣಾಜೆಗೆ ವರ್ಗವಗಿ, ಕೊನೆಗೆ ಗುರುಪುರ ಎಂಬಲ್ಲಿಗೆ ವಾಸ ಬದಲಿಸಿದ್ದ. ಇದೀಗ ನಾದಿನಿಯ ಮೇಲೆಯೇ ಕಣ್ಣಿಕ್ಕಿ ಅತ್ತ ಪತ್ನಿಗೂ ಬೇಡದವನಾಗಿ, ಇತ್ತ ನಾದಿನಿಯನ್ನೂ ಸೇರಲಾಗದೆ ಅತಂತ್ರ ಸ್ಥಿತಿಗೊಳಗಾಗಿದ್ದಾನೆ.