Posts

ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಮತ್ತು ಗ್ರಾಮೀಣ ವತಿಯಿಂದ ರಕ್ತದಾನ ಶಿಬಿರ

1 min read


ಬೆಳ್ತಂಗಡಿ;‌ಕೋವಿಡ್ ಸಂಕಷ್ಟದ ಮಧ್ಯೆ ವಿವಿಧ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಮತ್ತು ರಕ್ತದ ಕೊರತೆ ಎದುರಾಗಿರುವುದನ್ನು ಮನಗಂಡು ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಮತ್ತು ಗ್ರಾಮೀಣ ವತಿಯಿಂದ ಇಂದು ಬೆಳ್ತಂಗಡಿ ಅಶಾ ಸಾಲಿಯಾನ ಸಭಾಂಗಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮಾಜಿ ಶಾಸಕ ವಸಂತ ಬಂಗೇರ ಶಿಬಿರ ಉದ್ಘಾಟಿಸಿದರು. ವರ್ಷದ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಮತ್ತು ರೆಡ್‌ಕ್ರಾಸ್ ಸೊಸೈಟಿ ನೇತೃತ್ವದಲ್ಲಿ ಶಿಬಿರ‌ ನಡೆಯಿತು.‌ ವಿಧಾನ ಪರಿಷತ್ ಶಾಸಕ‌ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ ಗೌಡ, ಪ್ರಮುಖರಾದ ರಾಜಶೇಖರ ಕೊಟ್ಯಾನ್,ಅಭಿನಂದನ್ ಹರೀಶ್, ಜಗದೀಶ್ ಡಿ, ವಿನ್ಸೆಂಟ್ ಡಿಸೋಜಾ, ದಯಾನಂದ ಬೆಳಾಲು, ಸಂದೀಪ್ ಅರ್ವ, ಶೇಖರ್ ಕುಕ್ಕೇಡಿ, ದಿನೇಶ್ ಕೋಟ್ಯಾನ್ ಬೆಳಾಲು,  ಶಂಕರ ಹೆಗ್ಡೆ, ಅಶ್ರಫ್ ನೆರಿಯ, ಹಾಜಿರಾ, ಉಷಾ ಶರತ್, ಅನೂಪ್‌ ಬಂಗೇರ, ಅಬ್ದುಲ್ ರಹಿಮಾನ್ ಪಡ್ಪು, ನಮಿತಾ ಕೆ ಪೂಜಾರಿ, ಎಂ ನಝೀರ್ ಕುವೆಟ್ಟು, ಮೆಹಬೂಬ್ ಸಂಜಯನಗರ, ಮುಸ್ತಾರ್‌ಜಾನ್, ರವಿ ನೇತ್ರಾವತಿ ನಗರ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment