Posts

ದಲಿತ ಕುಟುಂಬದ ಸಂಕಷ್ಟಕ್ಕೆ ಮಾಜಿ ಶಾಸಕ ವಸಂತ ಬಂಗೇರರಿಂದ ಸ್ಪಂದನ 50 ಸಾವಿರ ರೂ. ವೆಚ್ಚದಲ್ಲಿ ತಾತ್ಕಾಲಿಕ ಮೇಲ್ಚಾವಣಿ ನಿರ್ಮಾಣಕ್ಕೆ ಕ್ರಮ

1 min read

ಬೆಳ್ತಂಗಡಿ; ಇಂದಬೆಟ್ಟು ಗ್ರಾ.ಪಂ ವ್ಯಾಪ್ತಿಯ ಬಂಗಾಡಿ ಊರ್ಲ ಎಂಬಲ್ಲಿ ದಲಿತ ಕುಟುಂಬವೊಂದು ವಾಸವಾಗಿರುವ ಮನೆಯ ಮೇಲ್ಛಾವಣಿ ಸಂಪೂರ್ಣ ನಾದುರಸ್ತಿಯಲ್ಲಿದ್ದು, ಸ್ಥಳಕ್ಕೆ ಮಾಜಿ‌ ಶಾಸಕ‌ ವಸಂತ ಬಂಗೇರ ಬುಧವಾರ ಧಾವಿಸಿ ಸ್ಪಂದಿಸಿದ್ದಾರೆ.

ಊರ್ಲ‌ ನಿವಾಸಿ, ಪರಿಶಿಷ್ಟ ಜಾತಿಯ   ಕೂಲಿ ಕಾರ್ಮಿಕರಾಗಿರುವ ಕಾಣದು ಮತ್ತು ಅವರ ಪುತ್ರ ರಾಧಾಕೃಷ್ಣ ಅವರು ನೆಲೆಸಿರುವ ಮನೆಯ ಮೇಲ್ಛಾವಣಿಯನ್ನು ಪ್ಲಾಸ್ಟಿಕ್ ಟಾರ್ಪಲ್ ನಿಂದ ಮುಚ್ಚಿದ್ದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ‌ ಬಗ್ಗೆ ಕಾಂಗ್ರೆಸ್ ಬಂಗಾಡಿ  ಬೂತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಊರ್ಲ, ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ಅನೂಪ್‌ ಎಂ. ಬಂಗೇರ ಅವರ ಮೂಲಕ ‌ಮಾಹಿತಿ ತಿಳಿದು ವಸಂತ  ಬಂಗೇರ ಅವರು ಸ್ಥಳಕ್ಕೆ ಧಾವಿಸಿದರು. 

ಮನೆಯವರಿಗೆ ಆಹಾರದ ಕಿಟ್ ಹಸ್ತಾಂತರಿಸಿದ ಬಂಗೇರರು, ಸದ್ರಿ‌ಕುಟುಂಬಕ್ಕೆ 50 ಸಾವಿರ ರೂ.‌ವೆಚ್ಚದಲ್ಲಿ ತಾತ್ಕಾಲಿಕ‌ ಶೆಡ್ಡ್ ನಿರ್ಮಿಸಲು ಗುರುವಾರ ಸಂಜೆಯ ಒಳಗಾಗಿ ಕ್ರಮಕೈಗೊಳ್ಳಲಾಗಿದೆ.

ಸದ್ರಿ ಕುಟುಂಬಕ್ಕೆ 1984 ರಲ್ಲಿ ನಾನೇ ಶಾಸಕನಾಗಿದ್ದಾಗ 9 ಸೆಂಟ್ಸ್ ಭೂಮಿಯನ್ನು ಭೂ ನ್ಯಾಯ ಮಂಡಳಿಯಲ್ಲಿ ಮಂಜೂರು ಮಾಡಿಸಿದ್ದೆ. ಇದೀಗ ಮನೆ ಕೂಡ ಮಂಜೂರಾಗಿದೆ. ಆದರೆ ಕುಟುಂಬ ಈಗ ಸಂಕಷ್ಟದಲ್ಲಿರುವ ಬಗ್ಗೆ ಗಮನಕ್ಕೆ ಬಂದಾಗ ಭೇಟಿ ನೀಡಿದ್ದೇನೆ ಎಂದು ಮಾದ್ಯಮದವರ ಜೊತೆ ಅವರು ಮಾತನಾಡಿದ್ದಾರೆ‌.

ಈ‌ ಸಂದರ್ಭ ಆಲ್ವಿನ್ ಅಪ್ಪೂಸ್ ಅವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment