Posts

ಎಸ್ಸೆಸ್ಸೆಪ್ ದ.ಕ ಈಸ್ಟ್ ಜಿಲ್ಲಾ ಮಖ್ದೂಮಿಯಾ ಸಮ್ಮಿಟ್

1 min read


ಬೆಳ್ತಂಗಡಿ; ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ವತಿಯಿಂದ ಮಹಾನುಭಾವರಾದ ಝೈನುದ್ದೀನ್ ಮಖ್ದೂಮ್ (ರ. ಅ) ಹೆಸರಿನಲ್ಲಿ "ಮಖ್ದೂಮಿಯಾ ಸಮ್ಮಿಟ್" ಎಂಬ 3 ದಿನಗಳ "ಆನ್ಲೈನ್ ಮುತಅಲ್ಲಿಮ್ ಸಂಗಮ" 2021 ಜೂನ್ 17,18,19 ರಂದು ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯಲಿದೆ.

ಜೂನ್ 17, ಗುರುವಾರದಂದು ಸಂಜೆ 4.30 ಯಿಂದ 6 ಗಂಟೆಗಳ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ತರಬೇತುದಾರರಾಗಿ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ  "ವಿಧ್ವಾಂಸರ ಜೀವನ" ಎಂಬ ವಿಷಯದಲ್ಲಿ ಮಾತನಾಡುವರು.  ಜೂನ್ 18 ರಂದು ರಾತ್ರಿ 7.30-8.30pm ರ ವರೆಗೆ ನಡೆಯುವ ಎರಡನೇ ದಿನದ ತರಬೇತಿಯಲ್ಲಿ ರಾಜ್ಯ ಎಸ್‌ವೈಎಸ್ ನೇತಾರರಾದ ಜಿಎಮ್ ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರು "ದಅವಾ ಸಂಘಟನೆಯಲ್ಲಿ ಸಕ್ರಿಯತೆ ಎಂಬ ವಿಷಯದಲ್ಲಿ ಮಾತನಾಡುವರು. ಹಾಗೂ ಜೂನ್ 19 ರ ಮೂರನೇ ದಿನದಂದು ರಾತ್ರಿ 8-10 ರವರೆಗೆ "ಇಮಾಂ ಗಝ್ಝಾಲಿ ರ.ಅ ವೀಕ್ಷಣೆಯಲ್ಲಿ ಮುತಅಲ್ಲಿಮರು" ಎಂಬ ವಿಷಯದಲ್ಲಿ ಅಂಕಣಕಾರ ಇಸ್ಮಾಯಿಲ್ ಸಅದಿ ಅಲ್ ಅಫ್ಲಲಿ ಮಾಚಾರ್ ಉಸ್ತಾದರು ತರಬೇತಿ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಈಸ್ಟ್ ಜಿಲ್ಲಾಧ್ಯಕ್ಷ ಜಿ.ಕೆ ಅಮ್ಜದಿ ಸುಳ್ಯ,ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಖಾಸಿಂ ಮದನಿ ಕರಾಯ, ಎಸ್ಸೆಸ್ಸೆಫ್ ರಾಜ್ಯ ಅಧ್ಯಕ್ಷ ಅಬ್ದುಲ್ ಲತೀಫ್ ಸಅದಿ,ಶೈಖುನಾ ಕನ್ಯಾನ ಉಸ್ತಾದ್,‌ ಲೆ.ಎಮ್ ಮುಸ್ತಫಾ ನಯೀಮಿ, ಹಾಫಿಲ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್, ಮಹಮ್ಮದ್ಅಲಿ ತುರ್ಕಳಿಕೆ,  ಅಬ್ದುರ್ರಝಾಕ್ ಸಅದಿ ಕೊಡಿಪ್ಪಾಡಿ, ಜೀರ್ಮುಕಿ ಸಖಾಫಿ ಮುಂತಾದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment