ಬೆಳ್ತಂಗಡಿ : ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದಿಂದ ಇಂದು ಮಂಗಳವಾರ ಉಜಿರೆ ಗ್ರಾಮ ಪಂಚಾಯತಿನ 21 ಸಿಬ್ಬಂದಿಗಳಿಗೆ ಮಾಸ್ಕ್ , ಸಾನಿಟೈಸರ್ , ಕ್ಯಾಪ್, ಫೇಸ್ ಶಿಲ್ಡ್ ಹಾಗೂ ಆಹಾರ ಕಿಟ್ ಗಳನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮೂಲಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ , ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ , ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾವತಿ.ಆರ್.ಶೆಟ್ಟಿ ,ಉಪಾಧ್ಯಕ್ಷ ರವಿ ಬರಮೇಲು , ಪಂಚಾಯತ್ ಅಭಿವೃದ್ದಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಮ್.ಶಶಿಧರ್ ಕಲ್ಮಂಜ, ಶ್ರೀಧರ್ ಕಲ್ಮಂಜ ಮತ್ತು ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.