Posts

ಹಿಂದೂ ಸಮಾಜವನ್ನು ಅವಹೇಳನಕಾರಿಯಾಗಿ ಬಿಂಬಿಸಿದ ನಟ ಚೇತನ್ ಕ್ರಮ ಖಂಡನೀಯ ವಿಹಿಂಪ, ಹಿಂದೂ ಪರಿವಾರ ಸಂಘಟನೆಗಳಿಂದ ಠಾಣೆಗೆ ದೂರು

2 min read

ಬೆಳ್ತಂಗಡಿ; ಇತ್ತೀಚೆಗೆ ಕನ್ನಡದ ನಟ ಚೇತನ್ ಎಂಬವರು ' ಸಾಮಾಜಿಕ , ಆರ್ಥಿಕ , ಶೈಕ್ಷಣಿಕ ಮತ್ತು ಲಿಂಗದ ಅಸಮಾನತೆಯ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ' ಎಂಬ ಪ್ರಾರಂಭದ ನುಡಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಕ್ಲಿಪ್‌ನ್ನು ಹರಿಯಬಿಟ್ಟಿದ್ದು ಇದರಲ್ಲಿ ಚೇತನ್‌ರವರು ಹಿಂದೂ ಸಮಾಜದ ಒಂದು ಅವಿಭಾಜ್ಯ ಅಂಗದ ವಿರುದ್ಧ ಅತ್ಯಂತ ಅವಹೇಳನಕಾರಿ ಮತ್ತು ದ್ವೇಷಭರಿತ ಕಾಲ್ಪನಿಕ ಮಾತುಗಳನ್ನು ಆಡಿದ್ದು , ಇದರ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಸ್ಪಷ್ಟ ಪ್ರಯತ್ನ ಕಂಡುಬರುತ್ತಿದೆ. ಇದನ್ನು ವಿಹಿಂಪ ಮತ್ತು ಬಜರಂಗದಳ ಹಾಗೂ   ಹಿಂದೂ ಸಮಾಜದ ತೀವ್ರವಾಗಿ ಖಂಡಿಸುತ್ತಿದ್ದು, ಇದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧವಾಗಿದ್ದೇವೆ ಎಂದು ಮಂಗಳವಾರ ಬೆಳ್ತಂಗಡಿಯಲ್ಲಿ ವಿಹಿಂಪ ಮತ್ತು ಹಿಂದೂ ಸಂಘಟನೆಗಳು ಕರೆದಿದ್ದ  ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದೆ.

ಬೆಳ್ತಂಗಡಿ ಸಂತೆಕಟ್ಟೆ ಪಿನಾಕಿ‌ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ, ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್ ಹೇಳಿದರು.

ಹಿಂದೂ ಸಮಾಜದ ಭಾಗವಾದ ಬ್ರಾಹ್ಮಣರ ಚಟುವಟಿಕೆಗಳಿಗೆ ಆಧ್ಯಾತ್ಮಿಕ ಭಯೋತ್ಪಾದನೆ ' ಎಂಬ ಹೊಸ ನಾಮಕರಣವನ್ನು ಚೇತನ್‌ರವರು ಮಾಡಿದ್ದು , ಆ ಮೂಲಕ ಬ್ರಾಹ್ಮಣರನ್ನು ಭಯೋತ್ಪಾದಕರು ಎಂಬಂತೆ ಬಿಂಬಿಸುವ ಮೂಲಕ ಹಿಂದೂ ಸಮಾಜದ ಇತರರು ಬ್ರಾಹ್ಮಣರನ್ನು ದ್ವೇಷಿಸುವಂತೆ ಮಾಡುವ ಉದ್ದೇಶ ಇದರ ಹಿಂದೆ ಅಡಗಿರುತ್ತದೆ ಎಂಬುದು ಸ್ಪಷ್ಟ. ಪ್ರಸ್ತುತ ಬ್ರಾಹ್ಮಣ ಸಮಾಜವನ್ನು ಗುರಿಯಾಗಿಟ್ಟು ಮಾಡುತ್ತಿರುವ ಇಂತಹ ಪ್ರಯತ್ನಗಳು ಮುಂದೆ ಹಿಂದೂ ಸಮಾಜದ ಇತರ ವಿಭಾಗಗಳನ್ನು ಗುರಿಯಾಗಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ . ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಅವಹೇಳನ ಮಾಡುವ ಅಥವಾ ಪ್ರತ್ಯೇಕಿಸುವ ಯಾವುದೇ ಪ್ರಯತ್ನಗಳನ್ನೂ ವಿಶ್ವಹಿಂದೂ ಪರಿಷತ್ ಖಂಡಿಸುತ್ತದೆ . ಜಗತ್ತಿನ ಎಲ್ಲಾ ಧರ್ಮಗಳಲ್ಲಿಯೂ ಧರ್ಮದೊಳಗಿನ ಉಪವಿಭಾಗಗಳನ್ನು ನಾವು ಕಾಣುತ್ತೇವೆ . ಇದು ಎಲ್ಲಾ ಧರ್ಮಗಳೂ ರೂಪಿಸಿಕೊಂಡ ತಮ್ಮೊಳಗಿನ ಒಂದು ವ್ಯವಸ್ಥೆಯಾಗಿದ್ದು , ಹಿಂದೂ ಧರ್ಮದಲ್ಲಿ ಮಾತ್ರ ಕಂಡುಬರುವ ವಿಶೇಷತೆ ಅಲ್ಲ . ಆದರೆ ಹಿಂದೂ ಧರ್ಮವನ್ನು ಒಡೆಯುವ ದುರುದ್ದೇಶವನ್ನು ಹೊಂದಿರುವ ಕೆಲವು ಅನಿಷ್ಟ ಶಕ್ತಿಗಳು ಅದಕ್ಕಾಗಿ ಬೇರೆ ಬೇರೆ ವ್ಯಕ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿರುವುದು ಖಂಡನೀಯ . ಬಹುಶಃ ಹಣ ಪಡೆದು ನಟಿಸುವುದನ್ನೇ ತನ್ನ ವೃತ್ತಿಯಾಗಿಸಿಕೊಂಡ  ಚೇತನ್‌ರವರು ಈ ಸಂದರ್ಭದಲ್ಲಿಯೂ ಯಾವುದೋ ಲಾಭಕ್ಕಾಗಿ ತನ್ನ ನಟನೆಯನ್ನು ಇಲ್ಲಿಯೂ ಮಾಡಿದ್ದಾರೆ ಎಂಬುದು ನಮ್ಮ ಭಾವನೆ . ಆದರೆ ತಮ್ಮ ಸ್ವಾರ್ಥ ಸಾಧನೆಗಾಗಿ ಹಿಂದೂ ಸಮಾಜದ ಯಾವುದೇ ವಿಭಾಗಗಳನ್ನು ಮತ್ತು ಅವುಗಳ ಆಚರಣೆಗಳು , ನಂಬಿಕೆಗಳು , ಜೀವನ ಪದ್ಧತಿಗಳು ಮುಂತಾದವುಗಳನ್ನು ಕೆಟ್ಟದಾಗಿ ಬಿಂಬಿಸುವ ಇಂತಹ ಪ್ರಯತ್ನಗಳನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಯಾವುದೋ ದುರ್ಲಾಭಕ್ಕಾಗಿ ಚೇತನ್ ಮತ್ತು ಅವರಂತವರು ಮಾಡುತ್ತಿರುವಂತಹ ಹಿಂದೂ ಸಮಾಜವನ್ನು ಒಡೆಯುವ ಇಂತಹ ಪ್ರಯತ್ನಗಳನ್ನು ವಿಶ್ವಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಗೋಷ್ಠಿಯಲ್ಲಿ ಪ್ರಕಟಿಸಲಾಯಿತು.


ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ, ಪ್ರಮುಖರಾದ ಡಾ. ಎಂ.ಎಂ ದಯಾಕರ್, ಬಿ.ಕೆ ಧನಂಜಯ ರಾವ್ ಪೂರಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿ.ಹಿಂ.ಪ ತಾಲೂಕು ಕಾರ್ಯದರ್ಶಿ ಮೋಹನ್ ಗಣಪತಿ‌ ಭಟ್, ಮುಖಂಡರಾದ ರಾಘವೇಂದ್ರ ಬೈಪಡಿತ್ತಾಯ, ವಿಶ್ವನಾಥ ಹೊಳ್ಳ, ಕೇಶವ ಭಟ್ ಅತ್ತಾಜೆ,‌ಗಿರೀಶ್ ಡೋಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment