Posts

ಕಲ್ಲಾಜೆ ಉಸ್ಮಾನ್ ಹಾಜಿ ನಿಧನ

0 min read

ಮುಂಡಾಜೆ ಗ್ರಾಮದ ಕಲ್ಲಾಜೆ‌ ಮರ್‌ಹೂಮ್ ಪಳ್ಳಿಕುಂಞಿ ಹಾಜಿ ಅವರ ಹಿರಿಯ ಪುತ್ರ, ಕೃಷಿಕ ಉಸ್ಮಾನ್ ಹಾಜಿ ಕಲ್ಲಾಜೆ (68ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಕೆಲದಿನಗಳಿಂದ ಅನಾರೋಗ್ಯಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರನ್ನು ಬುಧವಾರ ಸಂಜೆಯಷ್ಟೇ ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು.

ಉಸ್ಮಾನ್ ಹಾಜಿ ಅವರು ಮುಂಡಾಜೆ ಬದ್ರಿಯಾ ಜುಮ್ಮಾ ಮಸ್ಜಿದ್ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿದ್ದರು.

ಮೃತರು ಪತ್ನಿ ಆಯಿಶಾ, ಮೂವರು ಪುತ್ರರಾದ ವಿದೇಶಿ ಉದ್ಯೋಗಿ ಅನ್ವರ್, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮೊಯಿದಿನ್ ಅಶ್ರಫ್, ವಿದೇಶಿ ಉದ್ಯೋಗಿಯಾಗಿರುವ ಕಿರಿಯ ಪುತ್ರ ಅನ್ಸಾಫ್, ಏಳು ಮಂದಿ ಸಹೋದರರು, ನಾಲ್ವರು ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಗುರುವಾರ ಬೆಳಿಗ್ಗೆ 6.30 ಕ್ಕೆ ಸೋಮಂತಡ್ಕ ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment