ಬೆಳ್ತಂಗಡಿ; ದಿನಂದಿಂದ ದಿನಕ್ಕೆ ಇಂಧನ ಬೆಲೆಯೇರಿಕೆಯಾಗಿ ಇದೀಗ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿರುವುದನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವತಿಯಿಂದ ತಾಲೂಕಿನ ಪುಂಜಾಲಕಟ್ಟೆ, ಕಲ್ಲೇರಿ, ಮದ್ದಡ್ಕ, ಕೊಕ್ಕಡ, ಕುಪ್ಪೆಟ್ಟಿ ಮುಂತಾದ ನಗರಗಳಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪೆಟ್ರೋಲ್ ಬಂಕ್ ಗಳ ಎದುರು ವಾಹನಗಳಿಗೆ ಹಗ್ಗ ಕಟ್ಟಿ ಎಳೆದು, ಸೈಕಲ್ ತುಳಿದು, ಭಿತ್ತಿ ಪತ್ರ ಪ್ರದರ್ಶಿಸಿ, ಘೋಷಣೆ ಕೂಗಿ ವಿಭಿನ್ನ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಡೆದ ಈ ಪ್ರತಿಭಟನೆಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಹನೀಫ್ ಪುಂಜಾಲಕಟ್ಟೆ, ನಿಸಾರ್ ಕುದ್ರಡ್ಕ, ಫೈಝಲ್ ಮುರುಗೋಳಿ,ರಿಯಾಝ್ ಕುವೆಟ್ಟು, ಎಸ್.ಡಿ.ಪಿ.ಐ. ಬೆಳ್ತಂಗಡಿ ವಿಧಾನಸಭಾ ಸಮಿತಿಯ ಉಪಾಧ್ಯಕ್ಷ ಶುಕೂರ್ ಕುಪ್ಪೆಟ್ಟಿ, ಸದಸ್ಯರಾದ ಅಶ್ಫಾಕ್ ಪುಂಜಾಲಕಟ್ಟೆ, ಸಾಲಿ ಮದ್ದಡ್ಕ, ಮಜೀದ್ ಪುಂಜಾಲಕಟ್ಟೆ, ನವಾಜ್ ಕುದ್ರಡ್ಕ,ಅಝೀಝ್, ಆಸೀಫ್ ಕೊಕ್ಕಡ ಮುಂತಾದವರು ಭಾಗವಹಿಸಿದ್ದರು.