Posts

ಹಾಸನದಲ್ಲಿ ಲಾರಿಗೆ ಕಾರು ಡಿಕ್ಕಿ ಹೊಡೆದು ಇಂದಬೆಟ್ಟಿನ ಸಹೋದರರು ದಾರುಣ ಸಾವು

1 min read


ಬೆಳ್ತಂಗಡಿ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ನಿವಾಸಿ ಸಹೋದರರಿಬ್ಬರೂ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಎಂಬಲ್ಲಿ ಶನಿವಾರ ಸಂಜೆಯವೇಳೆ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಮನೆಯ ದಿ.ಗಣಪಯ್ಯ ಗೌಡರ ಮಕ್ಕಳಾದ ಅಣ್ಣ ಜಯಪ್ರಕಾಶ್(25ವ.) , ಸಹೋದರ ಯೋಗೀಶ್(23ವ.) ಸಾವನ್ನಪ್ಪಿದವರು. ಇನ್ನುಳಿದವರ  ಗುರುತು ಇನ್ನಷ್ಟೆ ಪತ್ತೆಯಾಗಬೇಕಿದೆ.

ಇಂದಬೆಟ್ಟು ನಿವಾಸಿ ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿರುವ ಜಯಪ್ರಕಾಶ್ ಗೌಡ ಅವರ 

ಕ್ವಿಡ್ ಕಾರಿನಲ್ಲಿ ಸಹೋದರ ಹಾಗೂ ವೃತ್ತಿಸಹಾಯಕರಾಗಿದ್ದ ಯೋಗೀಶ್ ಜೊತೆಗೂಡಿ ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಇವರು ಮನೆಯಿಂದ ಹೊರಟುಹೋಗಿದ್ದರೆಂದು ಮಾಹಿತಿ ಖಚಿತವಾಗಿದೆ. ಅವರ ಜೊತೆ ಇನ್ಯಾರ್ಯಾರು ಇದ್ದರು ಎಂಬುದು ಗೊತ್ತಾಗಿಲ್ಲ. ಇಂದು ಕೆಲಸ ಮುಗಿಸಿ ಊರಿಗೆ ವಾಪಾಸಾಗುತ್ತಿದ್ದ ವೇಳೆ ಈ ಅಪಘಾತ ಆಗಿದೆ.

ರಸ್ತೆಯಲ್ಲಿ ದಿಣ್ಣೆ(ಹಂಪ್) ಇದ್ದುದರಿಂದ ಮುಂದಿನಿಂದ ಹೋಗುತ್ತಿದ್ದ ಲಾರಿ ಬ್ರೇಕ್ ಹಾಕಿದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಇವರು ಚಲಿಸುತ್ತಿದ್ದ ಕಾರು ಲಾರಿಗೆ ಹಿಂದಿನಿಂದ ಡಿಕ್ಕಿಹೊಡೆದಿದೆ ಎಂದು ಹಾಸನ ಪೊಲೀಸರು ತಿಳಿಸಿದ್ದಾರೆ. 

ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಹಾಡಿದೈವ ಉಳ್ಳಾಕುಲು ಕ್ಷೇತ್ರದ ಪಕ್ಕದ ಮನೆಯ ರಾಮಣ್ಣ ಗೌಡ ಎಂಬವರ ಪುತ್ರಿ ಗೀತಾ ಅವರನ್ನು ನಿಡ್ಲೆ ಗ್ರಾಮದ ಗಣಪಯ್ಯ ಗೌಡ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಅವರು ಕಳೆಂಜ ಸನಿಹದ ಕಾಯರ್ತಡ್ಕ ಬಟ್ಯಾಲ್ ಎಂಬಲ್ಲಿ ವಾಸಿಸುತ್ತಿದ್ದು,  ದಂಪತಿಯ ಮೂವರು ಮಕ್ಕಳ ಪೈಕಿ ಮೃತ ಜಯಪ್ರಕಾಶ್ ಮತ್ತು ಯೋಗೀಶ್ ಇಬ್ಬರೇ ಗಂಡು ಮಕ್ಕಳು. ಇನ್ನೋರ್ವೆ ಸಹೋದರಿಯನ್ನು 6 ತಿಂಗಳ ಹಿಂದಷ್ಟೇ ಕನ್ಯಾಡಿ 1 ಗ್ರಾಮದ ಗುರಿಪಳ್ಳ ಎಂಬಲ್ಲಿಗೆ ಮದುವೆ ಮಾಡಿಕೊಡಲಾಗಿತ್ತು. ಮೃತರು ಇಬ್ಬರೂ ಕೂಡ ಅವಿವಾಹಿತರು. ಜಯಪ್ರಕಾಶ್ ಕಾಮಗಾರಿ ಗುತ್ತಿಗೆ ಪಡೆಯುತ್ತಿದ್ದರೆಂದು ಗೊತ್ತಾಗಿದ್ದು, ಸಹೋದರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಇದೀಗ ಇವರು ಮನೆಯಿಂದ ಹೊರಡುವ ವೇಳೆ ಇಬ್ಬರೇ ಹೋಗಿದ್ದು, ಕೆಲಸಕ್ಕೆ ಬೇರೆ ಯಾರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಗೊತ್ತಾಗಿಲ್ಲ.ಆದ್ದರಿಂದ ಉಳಿದವರ ಗುರುತುಪತ್ತೆ ಬಾಕಿ ಇದೆ.

ಘಟನೆ ವಿವರ ತಿಳಿಯುತ್ತಿದ್ದಂತೆ ಮೃತರ ಮಾವಂದಿರು ಹಾಸನ‌ ಕಡೆಗೆ ಪ್ರಯಾಣ ಆರಂಭಿಸಿದ್ದಾರೆ.

ಅಪಘಾತ ಸ್ಥಳಕ್ಕೆ ಹಾಸನ ಸಂಚಾರಿ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment