Posts

ಮಾನವ ಸ್ಪಂದನ ನೇತೃತ್ವದಲ್ಲಿ ಸಿಯೋನ್ ಆಶ್ರಮಕ್ಕೆ ಸೇನಿಟೈಸರ್, ಫಾಗಿಂಗ್ ಯಂತ್ರ ಕೊಡುಗೆ

1 min read


ಬೆಳ್ತಂಗಡಿ; ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ವಿದ್ಯುತ್ ಚಾಲಿತ ಫಾಗಿಂಗ್ ಮತ್ತು ಸೇನಿಟೈಸರ್ ಯಂತ್ರ ಹಾಗೂ ಇತರ ವೈದ್ಯಕೀಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಆಶ್ರಮದಲ್ಲಿ‌ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಾಣಿಶ್ರೀ ಮುಖ್ಯ ಅತಿಥಿಯಾಗಿದ್ದರು.

ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದ್ದರು.

ಕೋವಿಡ್ ಸೋಲ್ಜರ್ಸ್ ತಂಡದ‌ ಕೇಪ್ಟನ್ ಅಶ್ರಫ್ ಆಲಿಕುಂಞಿ, ಟೀಮ್ ಮೆನೇಜರ್ ಅಜಿತ್ ಪಿ.ಎಂ, ಸೋಲ್ಜರ್ ರಮೇಶ್ ಆಚಾರ್ಯ ಮತ್ತು ಶರೀಫ್ ಬೆರ್ಕಳ ಅವರು ಕೊಡುಗೆಯನ್ನು ಹಸ್ತಾಂತರಿಸಿದರು. 

ಸಂಸ್ಥೆಯ ಮೆನೇಜಿಂಗ್ ಡ್ರಸ್ಟಿ ಯು.ಸಿ ಪೌಲೋಸ್, ಆಡಳಿತಾಧಿಕಾರಿ ಸುಭಾಶ್ ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕಿ ಸರೋಜಾ, ಆಶಾ ಕಾರ್ಯಕರ್ತೆ ಸರೋಜಾ, ಸೇನಿಟೈಸರ್ ಯಂತ್ರಕ್ಕೆ ಸಹಕಾರ ಮಾಡಿದ ಉಮೇಶ್ ಆಚಾರ್ಯ, ರವಿಚಂದ್ರ ಭಂಡಾರಿ ಮುಂಡಾಜೆ ಉಪಸ್ಥಿತರಿದ್ದರು. ರಮೇಶ್ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ ಸಹಕಾರವನ್ನು ಸ್ಮರಿಸಲಾಯಿತು. 

20 ಲೀಟರ್ ಸೇನಿಟೈಸರ್, 1 ಸಾವಿರ ಮಾಸ್ಕ್‌ಗಳು ಮತ್ತು 600 ಕೈ ಗವಸುಗಳನ್ನೂ ಕೊಡುಗೆಯಲ್ಲಿ ಒಳಗೊಂಡಿದ್ದವು.

ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಸದಸ್ಯ ರಮೇಶ್ ಆಚಾರ್ಯ ಅವರು ಪ್ರತೀ ಎರಡು ವಾರಕ್ಕೊಮ್ಮೆ ಆಶ್ರಮದಲ್ಲಿ ಸೇನಿಟೈಸರ್ ಸೇವೆ, ರವಿಚಂದ್ರ ಭಂಡಾರಿ‌ ಅವರು ಪ್ರತೀ ತಿಂಗಳಿಗೊಮ್ಮೆ ಆಶ್ರಮವಾಸಿಗಳಿಗೆ ಉಚಿತ ಕ್ಷೌರ ಸೇವೆ ಉಚಿತವಾಗಿ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment