Posts

ತೆಂಕಕಾರಂದೂರು ದೇವಳದ ಸರಣಿ ಕಳವು; ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಆತಂಕ ನಿವಾರಿಸಿ ಪೆರಾಲ್ದರಕಟ್ಟೆ ಮಸ್ಜಿದ್ ಅಧ್ಯಕ್ಷ ನವಾಝ್ ಶರೀಫ್ ಆಗ್ರಹ

1 min read

ಗ್ರಾಮದ ತೆಂಕಕಾರಂದೂರು ವಿಷ್ಣುಮೂರ್ತಿ ದೇವಳದಲ್ಲಿ ಕಳೆದ ಬಾರಿ ನಡೆದ ಕಳ್ಳತನದ ಆರೋಪಿಗಳ ಬಗ್ಗೆ ಸುಳಿವು ಇನ್ನೂ ಅಲಭ್ಯವಾಗಿರುವ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಕಳ್ಳತನವಾಗಿದ್ದು ಜನರಲ್ಲಿ ಆತಂಕ ತಂದಿದೆ.‌

ಆದ್ದರಿಂದ ಪೊಲೀಸರು ಈ ಬಗ್ಗೆ ತೀವ್ರ ತನಿಖೆ ಕೈಗೊಂಡು ಪ್ರಕರಣವನ್ನು ಶೀಘ್ರದಲ್ಲೇ ಬೇಧಿಸಬೇಕು ಎಂದು ಪೆರಾಲ್ದರಕಟ್ಟೆ ಜುಮ್ಮಾ ಮಸ್ಜಿದ್ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ನವಾಝ್ ಶರೀಫ್ ಕಟ್ಟೆ ಆಗ್ರಹಿಸಿದ್ದಾರೆ.

ಕಳ್ಳತನ‌ ಕೃತ್ಯದ ಮಾಹಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ದೇವಳದ ಸಮಿತಿ ಮತ್ತು ಭಕ್ತರನ್ನು ಕುಳ್ಳಿರಿಸಿ ಮುಂಜಾಗ್ರತೆಯ ಪಾಠ ಮಾಡಿದ್ದಾರೆ. ಇದಕ್ಕಿಂತ ಪ್ರಕರಣದ ಪತ್ತೆಗೆ ಚಿಂತನೆ ನಡೆಸಿದರೆ ಚೆನ್ನಾಗಿತ್ತು. ದೇವಳ ಮಾತ್ರವಲ್ಲದೆ ಕೆಲವು ಸಮಯದ ಅಂತರದಲ್ಲಿ ಈ ಪರಿಸರದಲ್ಲಿ ಹಲವು ಕಳ್ಳತನ ಕೃತ್ಯ ಗಳು ನಡೆದಿವೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ರಾತ್ರಿ ಗಸ್ತು ಜಾಸ್ತಿಗೊಳಿಸಬೇಕು. ದೇವಳದ ಕಳ್ಳತನದಿಂದ ಈ ಪ್ರದೇಶದ ಹಿಂದೂ ಬಾಂದವರಲ್ಲದೆ ಎಲ್ಲಾ ಜನರೂ ಆತಂಕಪಡುವಂತಾಗಿದೆ‌. ಆದುದರಿಂದ ಪೊಲೀಸರು  ಆಧುನಿಕ ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ಕಳ್ಳರನ್ನು ಆದಷ್ಟು ಬೇಗ ಕಾನೂನಿನ ಮುಂದೆ ತಂದು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment