Posts

ಧರ್ಮಸ್ಥಳ‌- ಬೆಳ್ತಂಗಡಿ ಠಾಣೆಗಳಿಗೆ ಇಬ್ಬರು ಸಬ್ ಇನ್ಸ್‌ಪೆಕ್ಟರ್ ಗಳ ನೇಮಕ

0 min read


ಬೆಳ್ತಂಗಡಿ: ಧರ್ಮಸ್ಥಳ ಠಾಣೆಯಲ್ಲಿ‌ ಖಾಲಿಯಾಗಿದ್ದ ಸಬ್ ಇನ್ಸ್‌ಪೆಕ್ಟರ್ ಸ್ಥಾನಕ್ಕೆ ಮತ್ತು ಬೆಳ್ತಂಗಡಿ ಠಾಣೆಗೆ ಹೆಚ್ಚುವರಿಯಾಗಿ ಇನ್ನೊಬ್ಬರು ಸಬ್ ಇನ್ಸ್‌ಪೆಕ್ಟರ್ ಅವರನ್ನು ನೇಮಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ. (ಐಪಿಎಸ್) ಅವರು ಜು.15 ರಂದು ಆದೇಶ ಹೊರಡಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ತರಬೇತಿಯಲ್ಲಿದ್ದ (ಪ್ರೊಬೆಷನರಿ) ಸಬ್ ಇನ್ಸ್‌ಪೆಕ್ಟರ್ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ಅವರನ್ನು   ಧರ್ಮಸ್ಥಳ ಠಾಣೆಗೆ ನಿಯೋಜಿಸಲಾಗಿದೆ. ಪವನ್ ನಾಯಕ್ ಅವರು ವರ್ಗಾವಣೆ ಗೊಂಡ ಬಳಿಕ ತೆರವಾಗಿದ್ದ ಸ್ಥಾನ ಇದೀಗ ಭರ್ತಿಗೊಂಡಿದೆ.

ಈಗಾಗಲೇ ಬೆಳ್ತಂಗಡಿ ಠಾಣೆಯಲ್ಲಿ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಆಗಿ  ತರಬೇತಿ ಪೂರ್ತಿಗೊಳಿಸಿದ ಸಂದೀಪ್ ಕುಮಾರ್ ಶೆಟ್ಟಿ ಅವರನ್ನು ಬೆಳ್ತಂಗಡಿ ಠಾಣೆಗೇ ನೂತನ ಎಸ್.ಐ ಆಗಿ ಐಜಿಪಿ ಆದೇಶಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment