Posts

ಉಜಿರೆ ಅನುಗ್ರಹ ಶಾಲೆ ಮುಂಭಾಗದ ವಾಣಿಜ್ಯ ಮಳಿಗೆಯಲ್ಲಿ ಭಾರೀ ಬೆಂಕಿ ಅನಾಹುತ ||ಅನಾರ್ ಟಯರ್ಸ್, ರಕ್ಷಾ ಆಗ್ರೋ ಮಳಿಗೆ ಸಂಪೂರ್ಣ ಬೆಂಕಿಗಾಹುತಿ: ಲಕ್ಷಾಂತರ ರೂ. ನಷ್ಟ

0 min read



ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದಲ್ಲಿರುವ ಶಶಿಧರ ಗೌಡ ಬೆಡಿಗುತ್ತು ಅವರವಮಾಲಿಕತ್ವದ ವಾಣಿಜ್ಯ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬುಧವಾರ ಮಧ್ಯಾಹ್ನಾ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.  


ಬೆಂಕಿಯ ಕಾರಣಕ್ಕೆ ಸುವರ್ಣ ಹೊಟೇಲ್ ಪಕ್ಕದ ಅನಾರ್ ಟಯರ್ಸ್ ಮಳಿಗೆ , ರಕ್ಷಾ ಆಗ್ರೋ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಇದೀಗ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. 

ಇಂದು ಗಣೇಶ ಚತುರ್ಥಿ ಪ್ರಯುಕ್ತ ಮಳಿಗೆಗಳೆಲ್ಲವೂ ಬಂದ್ ಆಗಿತ್ತು. ಈ ವೇಳೆ ಎಲ್ಲೋ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಈ ಅವಘಡ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ‌ಭಾರೀ ಸಂಖ್ಯೆಯಲ್ಲಿ‌ ಜನ ಜಮಾಯಿಸಿದ್ದಾರೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment