ಬೆಳ್ತಂಗಡಿ: ಮರ ಕಡಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದರ ಅಡಿಗೇ ಸಿಲುಕಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಮಾ.9 ರಂದು ಮಧ್ಯಾಹ್ನ ನಡೆದಿದೆ.
ಪಟ್ರಮೆ ಗ್ರಾಮದ ಕಾಯಿಲ ಎಂಬಲ್ಲಿ ದೂಪದ ಮರ ಕಡಿಯುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಉಳಿಯ ಮನೆ ನಿವಾಸಿ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(23ವ.),ಸೇಸಪ್ಪ ಪೂಜಾರಿಯವರ ಪುತ್ರ ಸ್ವಸ್ತಿಕ್ (25ವ.)ಮತ್ತು ಇನ್ನೋರ್ವ ಉಪ್ಪಿನಂಗಡಿಯ ಗಣೇಶ್ 38ವ.) ಈ ಮೂವರು ಮೃತಪಟ್ಟವರು.
ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಧರ್ಮಸ್ಥಳ ಠಾಣಾ ಎಸ್ .ಐ ಪವನ್ ನಾಯಕ್ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.