ಬೆಳ್ತಂಗಡಿ; ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಇದರ ಮಹಾಸಭೆ ಮತ್ತು ಶೈಖುನಾ ತಾಜುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಹಝ್ರತ್ ಶೈಖ್ ಹಯಾತುಲ್ ಅವುಲಿಯಾ ದರ್ಗಾ ಶರೀಫ್, ಜುಮಾ ಮಸ್ಜಿದ್ ಗುರುವಾಯನಕೆರೆ ಇಲ್ಲಿನ ಸಮುದಾಯ ಭವನದಲ್ಲಿ ಜರುಗಿತು.
ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಘನ ಉಪಸ್ಥಿತಿ ನೀಡಿದರು.
ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಉದ್ಘಾಟಿಸಿದರು.
ಸುನ್ನೀ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್, ಸಯ್ಯಿದ್ ಅಬ್ದುಸ್ಸಲಾಂ ತಂಙಳ್ ಪುಂಜಾಲಕಟ್ಟೆ, ಸಯ್ಯಿದ್ ಹಬೀಬುರ್ರಹ್ಮಾನ್ ಮುಶೈಕ್ ಬಾ ಅಲವಿ ತಂಙಳ್ ಬೆಳಾಲು ಭಾಗವಹಿಸಿದ್ದರು.
ವೇದಿಕೆಯಲ್ಲಿ ಆದಂ ಅಹ್ಸನಿ, ಉಜಿರ್‌ಬೊಟ್ಟು ಅಬ್ದುಲ್ ಖಾದರ್ ಹಾಜಿ, ಅಬ್ಬಾಸ್ ಬಟ್ಲಡ್ಕ, ಗುಲ್ರೇಝ್ ಅಹಮ್ಮದ್ ರಝ್ವಿ, ಎಂ.ಕೆ ಬದ್ರುದ್ದೀನ್ ಪರಪ್ಪು, ಕಿಲ್ಲೂರು ಹಮೀದ್ ಫೈಝಿ, ಮುಹಮ್ಮದ್ ರಫಿ, ಅಬ್ದುಲ್ ರಹಿಮಾನ್ ಎರುಕಡಪು, ಸಾದಿಕ್ ಮಾಸ್ಟರ್, ಅಬ್ಬೋನು ಮದ್ದಡ್ಕ, ಕಾಸಿಂ ಮಲ್ಲಿಗೆಮನೆ, ಕಾಸಿಂ ಪದ್ಮುಂಜ, ಶರೀಫ್ ಸಖಾಫಿ ನೆಕ್ಕಿಲ್, ಇಕ್ಬಾಲ್ ಮಾಚಾರ್, ಪಿ.ಎಸ್ ಮದನಿ ತುರ್ಕಲಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಅಂಗೀಕರಿಸಿದ ತಾಲೂಕಿನ ಜಮಾಅತ್ ಗಳ ಖತೀಬರು, ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರು ಸ್ವಾಗತಿಸಿದರು. ಅಶ್ರಫ್ ಸಖಾಫಿ ಮಾಡಾವು ಪ್ರಸ್ತಾವನೆಗೈದರು. ಹನೀಫ್ ಸಖಾಫಿ ವರದಿ ವಾಚಿಸಿದರು.