ಬೆಳ್ತಂಗಡಿ: ಭಾರತೀಯ ಮಾಜ್ಡೂರು ಸಂಘ ಕರ್ನಾಟಕ ಇದರ ಯುವ ಕಾರ್ಯಕರ್ತರ ಅಭ್ಯಾಸ ವರ್ಗ ದಾವಣಗೆರೆ ಜ.21,22 ರಂದು ಜರಗಿದ್ದು ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಸೇರಿದಂತೆ ಜಿಲ್ಲೆಯ ಸಂಘಟನಾ ಪ್ರಮುಖರು ಭಾಗಿಯಾಗಿದ್ದಾರೆ.
ಬಿಎಮ್‌ಎಸ್ ಜಿಲ್ಲಾಧ್ಯಕ್ಷರು ಅನಿಲ್ ಕುಮಾರ್ ಯು ಬೆಳ್ತಂಗಡಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಬೆಳ್ತಂಗಡಿ, ಜಿಲ್ಲಾ ಸದಸ್ಯ ತೀಕ್ಷಿತ್ ಕುಮಾರ್ ಕೆ.ದಿಡುಪೆ, ಉಪಾಧ್ಯಕ್ಷ ಗಣೇಶ್ ಕುಲಾಲ್ ಮಂಗಳೂರು, MRPL ಯೂನಿಯನ್ ಕಾರ್ಯದರ್ಶಿ ರೂಪೇಶ್, ರೈ ಮಂಗಳೂರು, ಸುಳ್ಯ ತಾಲೂಕು ಸಂಚಾಲಕ ಮಧುಸೂಧನ್ ಸುಳ್ಯ ಇವರು ಭಾಗಿಯಾದರು. ಈ ಅಭ್ಯಾಸವರ್ಗದಲ್ಲಿ ಬಿಎಮ್‌ಎಸ್ ನಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಸುರೇಂದ್ರನ್ ಜೀ, ದಕ್ಷಿಣ ಮತ್ತು ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ದುರೈರಾಜ್, ದಕ್ಷಿಣ ಪ್ರಾಂತದ ಸಹ ಕಾರ್ಯವಾಹ ಪಟ್ಟಾಬಿರಾಮ, ಬಿಎಮ್‌ಎಸ್ ರಾಜ್ಯಾಧ್ಯಕ್ಷ ಶಂಕರ್ ಸೂಳೆಗಾವ್, ಪ್ರಧಾನ ಕಾರ್ಯದರ್ಶಿ H.I ವಿಶ್ವನಾಥ್ ಇವರು ಇದ್ದರು.
--------
ವರದಿ: ಅಚ್ಚು ಮುಂಡಾಜೆ