Posts

ಬುಲೆಟ್ ಬೈಕಿನಲ್ಲಿ ಮನೆಯಿಂದ ಹೊರಹೋಗಿದ್ದ ಕುದ್ರಡ್ಕದ ಮಧುಮಗ ನೇಣಿಗೆ ಶರಣಾದುದೇಕೆ?

2 min read



ಬೆಳ್ತಂಗಡಿ: ಕಳೆದ ವಾರದ ಆದಿತ್ಯವಾರವಷ್ಟೇ  ನವವಿವಾಹಿರನಾಗಿ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದ್ದ ಮಧುಮಗನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಕುದ್ರಡ್ಕ ಎಂಬಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕುದ್ರಡ್ಕ ಪಲಿಕೆ ಮನೆ ನಿವಾಸಿ, ಕಿರು ಹೊಟೇಲ್ ಉದ್ಯಮಿ ಸುಲೈಮಾನ್ ಪಲಿಕೆ ಎಂಬವರ ಪುತ್ರ ನಾಸಿರ್(27) ಎಂಬವರೆಂದು ಗುರುತಿಸಲಾಗಿದೆ.



ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಬುಲೆಟ್ ಬೈಕ್
 ತೆಗೆದುಕೊಂಡು ಹೋಗಿದ್ದ ನಾಸಿರ್ ಸುಮಾರು ಹೊತ್ತಾದರೂ ಮರಳಿ ಬಂದಿರಲಿಲ್ಲ. ಅಲ್ಲದೆ ಅವರ ಮೊಬೈಲ್ ಫೋನ್ ಕೂಡ ಸ್ಪಂದಿಸದ ಕಾರಣ ಅವರ ಅಣ್ಣ ಹಾಗೂ ಸ್ನೇಹಿತರು ನಾಲ್ಕು ಮಂದಿ ಸೇರಿ ಮನೆಯ ಪಕ್ಕದಲ್ಲೆಲ್ಲಾ ಹುಡುಕಾಟ ಆರಂಭಿಸಿದ್ದರು. ಹೀಗೆ ಪತ್ತೆ ಕಾರ್ಯ ಮಾಡುತ್ತಿರುವಾಗ ಅವರು ಹೋಗಿದ್ದ ಬುಲೆಟ್ ಬೈಕ್ ಕುದ್ರಡ್ಕ ಕಲ್ಲಿನ ಕೋರೆ ಬಳಿ ಪುಂಚಪಾದೆ ಎಂಬಲ್ಲಿ ನಿಲ್ಲಿಸಿರುವುದು ಕಂಡುಬಂತು.‌ ಹಾಗೇ ಅಲ್ಲೆಲ್ಲಾ ಪರಿಶಿಸಿದ ವೇಳೆ ಬೈಕ್ ಗಿಂತ ತುಸು ದೂರದಲ್ಲಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಳೆದ ಆದಿತ್ಯವಾರವಷ್ಟೇ ನಾಸಿರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಲ್ಲೇರಿ ಕ್ವಾಟ್ರಸ್ ಪ್ರದೇಶದ ಯುವತಿಯನ್ನು ವಿವಾಹವಾಗಿದ್ದ ಅವರು ವಿವಾಹ ನಂತರದ ಹೊಇಗುವ ಬರುವ ಎಲ್ಲಾ ಕಾರ್ಯಕ್ರಮಗಳನ್ನೂ ಸಂಘಟಿಸಿದ್ದರು. ಎಲ್ಲಾ ಕಾರ್ಯಕ್ರಮ ಗಳಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು ಶುಭಾಶಯ ಕೋರಲು ಆಗಮಿಸಿದ್ದ ಬಂಧುಗಳು, ಸ್ನೇಹಿತರ ಜೊತೆ ಆತ್ಮೀಯವಾಗಿಯೇ ಬೆರೆತಿದ್ದರು.

ಹೀಗಿರುವಂತೆ ಒಮ್ಮೆಲೇ ಘಟಿಸಿ‌ಹೋಗಿರುವ ಈ ಅಸಹಜ ಸಾವಿನ ಬಗ್ಗೆ ಊರಿನಲ್ಲಿ ವಿವಿಧ ರೀತಿಯ ಚರ್ಚೆಗಳು ಆರಂಭವಾಗಿವೆ. 

ಐವರು ಮಕ್ಕಳಲ್ಲಿ ನಾಸಿರ್ ಕೊನೆಯವರು; 

ಪಲಿಕೆ ಸುಲೈಮಾನ್ ಮತ್ತು ಝರೀನಾ ದಂಪತಿಯ ಐವರು ಗಂಡು ಮಕ್ಕಳಲ್ಲಿ ನಾಸಿರ್ ಕೊನೆಯವರು. ಓರ್ವ ಅಣ್ಣ ವಿದೇಶದಲ್ಲಿದ್ದು, ಓರ್ವ ಪಿಕಪ್ ಇಟ್ಟುಕೊಂಡು ಊರಲ್ಲೇ ಇದ್ದಾರೆ.‌ಇ ನಾಸಿರ್ ಸೇರಿದಂತೆ ಮೂವರು ಬೆಂಗಳೂರಿನಲ್ಲಿ ನೆಲೆಸಿ ತರಕಾರಿ ಮತ್ತು ಹಣ್ಣುಹಂಪಲು ಅಂಗಡಿ ನಡೆಸುತ್ತಿದ್ದಾರೆ. ನಾಸಿರ್ ಅವರೂ ಅಣ್ಣಂದಿರ ಜೊತೆ ಕೆಲಸ‌ ಮಾಡುತ್ತಿದ್ದರು.‌ ವಿವಾಹ ಸಂಬಂಧವಾಗಿ ಅವರು ಊರಿಗೆ ಬಂದಿದ್ದು ಕಾರ್ಯಕ್ರಮಗಳೆಲ್ಲವೂ ಸಾಂಗವಾಗಿ ನಡೆದಿತ್ತು. ಆದರೆ ನಡೆಯಬಾರದ ಘಟನೆಯೊಂದು ನಡೆದುಹೋಗಿದ್ದು ಕಾರಣ ನಿಗೂಢವಾಗಿದೆ.

ಕೂಡುಕುಟುಂಬ; 

ಸುಲೈಮಾನ್ ಅವರ ನಾಲ್ವರು ಮಕ್ಕಳಿಗೆ ಈಗಾಗಲೇ ವಿವಾಹವಾಗಿದ್ದು ಎಲ್ಲರೂ ಸಂಯುಕ್ತ ಕುಟುಂಬವಾಗಿ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ. ವಿದೇಶದಲ್ಲಿ ಇರುವ ಅವರ ಅಣ್ಣನ ಪತ್ನಿ ಮಾತ್ರ ಹೆಚ್ಚಾಗಿ ತವರು ಮನೆಯಲ್ಲೇ  ಇದ್ದು ಅಗತ್ಯ ಕಾರ್ಯಕ್ರಮಗಳಿಗಾಗಿ ಪತಿ ಮನೆಗೆ ಬಂದು ಕೆಲದಿನ‌ಇದ್ದು ಹೋಗುತ್ತಿದ್ದರೆಂದು ತಿಳಿದುಬಂದಿದೆ. ನಾಸಿರ್ ತಂದೆ ಸುಲೈಮಾನ್ ಅವರು ಕುದ್ರಡ್ಕ ರಸ್ತೆ ಬದಿ ಸಣ್ಣ ಹೊಟೇಲ್ ನಡೆಸುತ್ತಿದ್ದು ಎಲ್ಲರಿಗೂ ಪರಿಚಿತರಾಗಿದ್ದಾರೆ.

ಸ್ವಲ್ಪ ಅನಾರೋಗ್ಯ ಸಮಸ್ಯೆ ಹಿಂದೆ ಇತ್ತು;

ಮೃತ ನಾಸಿರ್ ಅವರಿಗೆ ಹಿಂದೊಮ್ಮೆ ಮಾನಸಿಕವಾಗಿ ಸ್ವಲ್ಪ ಅನಾರೋಗ್ಯ ಇತ್ತು ಎಂದು ಅವರನ್ನು ಬಲ್ಲವರು ತಿಳಿಸುತ್ತಾರೆ. ಆದರೆ ಈಗ ಅಂತಹಾ ಯಾವುದೇ ಸಮಸ್ಯೆ ಇರಲಿಲ್ಲ ವೆಂದೂ ತಿಳಿಸುತ್ತಾರೆ. ಆರ್ಥಿಕವಾಗಿಯೂ ಮಧ್ಯಮ ಸ್ಥರದಲ್ಲಿರುವ ಅವರಿಗೆ ಆ ಕಾರಣಕ್ಕೆ ಈ ಸಾವು ಆಗಲು ಸಾಧ್ಯವಿಲ್ಲ ಎಂಬುದು ಅವರನ್ನು ಬಲ್ಲವರ ಮಾತು.

ಬೆಳ್ತಂಗಡಿ ಶವಾಗಾರದಲ್ಲಿ ಪೋಸ್ಟ್ ಮಾರ್ಟಂ;

ಘಟನಾ ವಿವರ ಲಭಿಸುತ್ತಿರುವಂತೆ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಅಲ್ಲಿ ಪೂರ್ಣ ಮಹಜರು ಹಾಗೂ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ. ಸೇವಾ ಯುವಕರ ತಂಡ ಬೆಳ್ತಂಗಡಿ ಮಸ್ಜಿದ್ ನಲ್ಲಿ ಶವ ಸ್ನಾನ ವಿಧಿ ಮುಗಿಸಿ ಮನೆಯವರಿಗೆ  ಮೃತದೇಹ ಹಸ್ತಾಂತರ ಮಾಡಿದ್ದಾರೆ.


ಕೊಲೆಯೋ? ಆತ್ಮ ಹತ್ಯೆಯೋ?

ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳು ಮೂಡಿದ್ದು, ಇದೊಂದು ಆತ್ಮಹತ್ಯೆ ಯೋ ಅಥವಾ ಕೊಲೆಯೋ ಎಂಬ ಚರ್ಚೆ ನಡೆದಿದೆ. ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ‌ಕೈಗೊಂಡರೆ  ಸತ್ಯಾಂಶ ತಿಳಿಯಬೇಕಾಗಿದೆ ಎಂಬ ಅಭಿಪ್ರಾಯ ಇದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment