ಬೆಳ್ತಂಗಡಿ: ರಹ್ಮಾನಿಯ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರ್ ನಲ್ಲಿ ಧಾರ್ಮಿಕದ ಜೊತೆಗೆ ಸಮನ್ವಯ ಶಿಕ್ಷಣ ಕಲಿಯುವ ಮುತಅಲ್ಲಿಮ್ ಮಕ್ಕಳ ದಅವಾ ದರ್ಸ್ ಆರಂಭೋತ್ಸವ ದರ್ಗಾ ಪ್ರಾರ್ಥನೆಯೊಂದಿಗೆ ನಡೆಯಿತು.
ಉದ್ಘಾಟನೆಯನ್ನು ರಹ್ಮಾನಿಯಾ ಅರೆಬಿಕ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ನೆರವೇರಿಸಿದರು.
ಸಂಸ್ಥೆಯ ಅಧ್ಯಕ್ಷ ಕೆ. ಯು ಇಬ್ರಾಹಿಂ ಸ್ವಾಗತಿಸಿದರು. ಮುದರ್ರಿಸ್ ಹಾಫಿಲ್ ಅಹಮದ್ ಸಖಾಫಿ ಅಲ್ ಕಾಮಿಲ್ ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಸದಸ್ಯರಾದ ಎ. ಯು ಮುಹಮ್ಮದ್ ಅಲಿ, ಸಿದ್ದಿಕ್ ಕೆ. ಹೆಚ್, ಅಬ್ಬಾಸ್ ಕೆ.ಹೆಚ್, ದಿಡುಪೆ ಮಸ್ಜಿದ್ ಅಧ್ಯಕ್ಷ ಡಿ. ಬಿ ಇಸ್ಮಾಯಿಲ್ ಮುಸ್ಲಿಯಾರ್, ಜಿ. ನಗರ ಮಸ್ಜಿದ್ ಅಧ್ಯಕ್ಷ ಉಸ್ಮಾನ್ ಪಗರೆ, ಕುಕ್ಕಾವು ಮಸ್ಜಿದ್ ಹಾಗೂ ಎಸ್‌ವೈಎಸ್ ಅಧ್ಯಕ್ಷ ಅಬೂಬಕ್ಕರ್ ಕುಕ್ಕಾವು, ಪಿಟಿಎ ಅಧ್ಯಕ್ಷ ಡಿ.ವೈ ಉಮರ್ ಕುಕ್ಕಾವು, ಸ್ವಲಾತ್ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್, ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜುದ್ದೀನ್, ಕಾರ್ಯದರ್ಶಿ ಜಬ್ಬಾರ್ ಡಿ.ಹೆಚ್, ಮದರಸ ಪಿಟಿಎ ಅಧ್ಯಕ್ಷ ರಾಝಿ ಪಿ.ಎ, ಎಸ್‌ಡಿಎಂಸಿ ಅಧ್ಯಕ್ಷ ಹೈದರ್ ಅಲಿ, ಆರ್‌ಡಿಸಿ ಅಧ್ಯಕ್ಷ ಮುಹಮ್ಮದ್ ಶರೀಫ್, ಅಂಗ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು, ಶಿಕ್ಷಣ ಸಂಸ್ಥೆಯ ನಿರ್ದೇಶಕರುಗಳು, ಸಂಸ್ಥೆಯ ಸಿಬ್ಬಂದಿಗಳು, ದರ್ಸ್ ವಿದ್ಯಾರ್ಥಿಗಳು, ಮುದರ್ರಿಸ್ ಇರ್ಫಾನ್ ಸಖಾಫಿ ವೇಣೂರು ಮೊದಲಾದವರು ಭಾಗವಹಿಸಿದ್ದರು.
ಕಾಜೂರಿನಲ್ಲಿ ಅನೇಕ ವರ್ಷಗಳಿಂದ ದರ್ಸ್ ಶಿಕ್ಷಣ ಮುಂದುವರಿಯುತ್ತಿದ್ದು ಇಲ್ಲಿ ಕಲಿಯುವ ಮಕ್ಕಳಿಗೆ ಉಚಿತ ಊಟ ವಸತಿಯೊಂದಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.ಪ್ರಸ್ತುತ ವರ್ಷ 41 ಮುತಅಲ್ಲಿಂಗಳು ಪ್ರವೇಶ ಪಡೆದಿದ್ದಾರೆ.