ಬೆಳ್ತಂಗಡಿ: ಕಾರಿಗೆ ಕೆಸರು ನೀರು ಹಾರಿತು ಎಂಬ ಕ್ಷುಲಕ್ಕ ಕಾರಣಕ್ಕೆ ಅಳದಂಗಡಿ ಸನಿಹದ ಪಿಲ್ಯ ಎಂಬಲ್ಲಿ ಸಾರ್ವಜನಿಕವಾಗಿ ಇಬ್ಬರು ಚಾಲಕರುಗಳು ವಾಗ್ವಾನ ನಡೆಸಿಕೊಂಡು ಪರಸ್ಪರ ಹೊಡದಾಡಿಕೊಂಡ ಘಟನೆ ಶನಿವಾರ ನಡೆದಿದೆ. ಈ ಸಂಬಂಧ ಇತ್ತಂಡಗಳ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ಕಡೆಯಿಂದ ಅಣ್ಣಪ್ಪ ಎಂಬವರು ದೂರು ನೀಡಿದ್ದು, ತನಗೆ ಸಾಧಿಕ್ ಬಳೆಂಜ ಮತ್ತು ಸಿರಾಜ್ ಕಾಪಿನಡ್ಕ ಹಲ್ಲೆ ನಡೆಸಿದ್ದಾಗಿ ಆಪಾದಿಸಿದ್ದರು. ಇನ್ನೊಂದೆಡೆಯಿಂದ ಸಾದಿಕ್ ಅವರು ಅಣ್ಣಪ್ಪ ಅವರು, ತನಗೆ ಹಲ್ಲೆನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.
ಅಡಿಕೆ ವ್ಯಾಪಾರಿಯಾಗಿರುವ ಬಳಂಜದ ಸಾದಿಕ್ ಎಂಬವರ ಮಾರುತಿ ಕಾರ್ ಗೆ ಸುಲ್ಕೇರಿಯಿಂದ ಬೆಳ್ತಂಗಡಿಯತ್ತ ತಮ್ಮ ಕೆಲಸಕ್ಕೆ ತೆರಳುತ್ತಿದ್ದ ಲಾರಿ ಮಾಲಕರಾಗಿರುವ ಅಣ್ಣಪ್ಪ ಎಂಬವರ ಫಿಗೋ ಕಾರು ಪಿಲ್ಯ ಮಾರಿಗುಡಿ ಬಳಿ ಮಾರ್ಗ ಬದಿ ಹಾದು ಹೋಗುವಾಗ ಆಕಸ್ಮಿಕವಾಗಿ ಮಳೆಯ ಕೆಸರು ನೀರು ಹಾರಿದ್ದು ಇಡೀ ಘಟನೆಗೆ ಕಾರಣವಾಗಿದೆ.
ಕೋಪಗೊಂಡ ಸಾದಿಕ್ ಮತ್ತು ಅವರ ಜೊತೆ ಪ್ರಯಾಣಿಸುತ್ತಿದ್ದ ಸಿರಾಜ್ ಸೇರಿ ಅಣ್ಣಪ್ಪ ಅವರಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ.ಈ ವೇಳೆ ನನ್ನ ಮೊಬೈಲ್ ಪೋನಿಗೂ ಹಾನಿಯಾಗಿದೆ ಎಂಬುದು ಅಣ್ಣಪ್ಪ ಅವರು ನೀಡಿದ ದೂರಿನ ಸಾರಾಂಶ.
ಅವರ ದೂರಿನ ಮೇರೆಗೆ ಸಾದಿಕ್ ತಂಡದ ಮೇಲೆ ಠಾಣೆಯಲ್ಲಿ
IPC ಸೆಕ್ಷನ್‌ನಡಿ 323,324,341,504,506,427 ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆಯಿಂದ ಸಾದಿಕ್ ಅವರು ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಅಣ್ಣಪ್ಪ ಅವರ ಮೇಲೆ ಆಪಾದನೆ ಮಾಡಿದ್ದರಿಂದ ಐಪಿಸಿ ಸೆಕ್ಷನ್
323,341,504,506 ರಂತೆ ಪ್ರತಿ ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭಿಸಿದ್ದಾರೆ.