Posts

ಯೋಗಾಸನದಲ್ಲಿ 6ರ ಬಾಲಕನ ಹೊಸ ದಾಖಲೆ

1 min read


ಬೆಳ್ತಂಗಡಿ; ಜೂ 21 ರಂದು ವಿಶ್ವಾದ್ಯಂತ ನಡೆಯುವ ವಿಶ್ವ ಯೋಗ ದಿನಾಚರಣೆಯ ಸಂಭ್ರಮ ಕಳೆಗಟ್ಟಿರುವ ಮಧ್ಯೆಯೇ ಯೋಗ ವಿಧಾನದ ಕಠಿಣ ಭಂಗಿ ಯಲ್ಲೊಂದಾದ ವಜ್ರಾಸನದಲ್ಲಿ ಮಾಸ್ಟರ್ ಅಕ್ಷಯ್‌ ಮುಗೆರೋಡಿ  ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸ. ಹಿ ಪ್ರಾರ್ಥಮಿಕ ಶಾಲೆ ಪದ್ಮುಂಜ ಇಲ್ಲಿಯ 1ನೆ ತರಗತಿಯ ವಿದ್ಯಾರ್ಥಿಯಾದ‌ ಅಕ್ಷಯ್ ಇವರು ಕೃಷಿಕ ಪುರುಷೋತ್ತಮ‌ ಗೌಡ ಮುಗೆರೋಡಿ ಮತ್ತು ಲೀಲಾ (ಮಂಜುಳಾ) ದಂಪತಿಯ ಪುತ್ರನಾಗಿದ್ದಾರೆ.  

ವಜ್ರಾಸನದಲ್ಲಿ ಕೈಗಳನ್ನು ಹಿಂದಕ್ಕೆ ಕಟ್ಟಿ ತಲೆಯನ್ನು ನೆಲಕ್ಕೆ ತಾಗಿಸುವ ಭಂಗಿಯಲ್ಲಿ 26 ನಿಮಿಷ 35 ಸೆಕುಂಡುಗಳ ಧೀರ್ಘ ಸ್ಥಿರತೆ ಕಾಯ್ದುಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. 

ಇದು ಈ ಹಿಂದೆ ತಮಿಳುನಾಡಿನ 8ರ ಬಾಲಕಿ ಆರಾಧನಾ ಮಾಡಿರುವ 15 ನಿಮಿಷ 10 ಸೆಕುಂಡು 599 ಮಿನಿಸೆಕುಂಡಿನ ದಾಖಲೆಯನ್ನು ಸರಿಗಟ್ಟಿದೆ. 

ಆ ಮೂಲಕ ಇದೀಗ ಅಕ್ಷಯ್ ಅವರು ತನ್ನ ಆರನೇ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದು ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಇವರ ತಾಯಿ ಲೀಲಾ ಅವರೂ ಕೂಡ ಈಗಾಗಲೇ ಬೈಸಿಕಲ್ ಕ್ರಂಚಸ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿ ಪಡೆದವರಾಗಿದ್ದಾರೆ.

---

ವರದಿ; ಅಚ್ಚು ಮುಂಡಾಜೆ


ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment