Posts

ಬದುಕು ಕಟ್ಟೋಣ ಬನ್ನಿ ಆಪ್ತರಕ್ಷಕ‌ವಾಹನ ಸೇವೆಯ ಸಮಾರೋಪ ದಾನಿಗಳಿಗೆ, ಸ್ವಯಂ ಸೇವಕರಿಗೆ ಅಭಿನಂದನೆ

1 min read


ಬೆಳ್ತಂಗಡಿ:  ಬದುಕು ಕಟ್ಟೋಣ ಬನ್ನಿ ತಂಡ,‌ರೋಟರಿ ಕ್ಲಬ್ ಸಹಯೋಗ ಹಾಗೂ ದಾನಿಗಳ ನೆರವಿನೊಂದಿಗೆ ಕಳೆದ 40 ದಿನಗಳಿಂದ ತಾಲೂಕಿನಲ್ಲಿ  ಹಮ್ಮಿಕೊಳ್ಳಲಾಗಿದ್ದ ಆಪ್ತತರಕ್ಷಕ ವಾಹನ ಸೌಲಭ್ಯದ ಸಮಾರೋಪ ಜೂ.20 ರಂದು ಉಜಿರೆ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಸೇವಾ ದಾನಿಗಳಿಗೆ ಸನ್ಮಾನ ನೆರವೇರಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿ, ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಸಹಯೋಗದಿಂದ ನಡೆದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘನೀಯ. ಮುಂದೆಯೂ ಕೂಡ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳು ಈ ತಂಡದಿಂದ ಆಗಬೇಕಾಗಿದ್ದು , ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕೇಳಿಕೊಂಡರು.


ಈ ಸಂದರ್ಭದಲ್ಲಿ ಆಪ್ತರಕ್ಷಕ ವ್ಯವಸ್ಥೆಗೆ ಉಚಿತ ವಾಹನದ ಒದಗಿಸಿಕೊಟ್ಟ  ಉದ್ಯಮಿ ರವಿಚಂದ್ರ ಚಕ್ಕಿತ್ತಾಯ, ಜೈಸನ್ ಜೋಯಲ್ ಡಿ'ಸೋಜಾ, ನೋಟರಿ ವಕೀಲರಾದ ಗೋಪಾಲಕೃಷ್ಣ ಗುಲ್ಲೋಡಿ , ಸುರೇಶ್ ಪೆರ್ಲ , ಉಜಿರೆಯ ಉದಯ ಅಚಾರಿ , ಶಶಿಧರ್ ಎಮ್ ಕಲ್ಮಂಜ ಇವರನ್ನು ಸನ್ಮಾನಿಸಲಾಯಿತು.
 40 ದಿನದಿಂದ ಆಪ್ತರಕ್ಷಕ ಸೇವೆ ನೀಡಿದ ಎಲ್ಲಾ ಮಂದಿ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರದಲ್ಲಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡ್ಡೆಟ್ಟಾಯ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ.ಆರ್‌.ಶೆಟ್ಟಿ,‌ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್ . ಪ್ರಕಾಶ್ ಶೆಟ್ಟಿ ನೊಚ್ಚ , ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ್‌.ಕೆ.ವಿ , ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ , ಲಕ್ಷ್ಮೀ ಗ್ರೂಪ್ ಮಾಲಕ ಮೋಹನ್ ಕುಮಾರ್ , ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ , ಉದ್ಯಮಿಗಳಾದ ಲಕ್ಷ್ಮಣ ಸಪಲ್ಯ ,  ನೋಟರಿ ನ್ಯಾಯವಾದಿ ಗೋಪಾಲಕೃಷ್ಣ ಗುಲ್ಲೋಡಿ ಶ್ರೀಧರ್ ಮರಕ್ಕಡ ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment