ಬೆಳ್ತಂಗಡಿ; ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಉಜ್ವಲ ಗ್ಯಾಸ್ ಲಾಯಿಲ ಗ್ರಾಮದ 23 ಕುಟುಂಬಗಳಿಗೆ ಮಂಜೂರಾಗಿ ವರ್ಷ ಸಂದರೂ ಇನ್ನೂ ಕೂಡ ಸೌಲಭ್ಯದ ವಿತರಣೆ ಆಗಿಲ್ಲ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈ ಸಂಬಂಧ ಬೆಸ್ಟ್ ಫೌಂಡೇಶನ್ ಲಾಯಿಲ ಘಟಕದ ಪದಾಧಿಕಾರಿಗಳು ಮೇ.31 ರಂದು ಪುತ್ತೂರು ಸಹಾಯಕ ಆಯುಕ್ತರ ಸಮ್ಮುಖ ತಹಶಿಲ್ದಾರ್ ಮಹೇಶ್ ಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಒಂದು ವಾರದಿಳಗೆ ಈ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಆಗದಿದ್ದರೆ ಸಂಘಟನೆಯ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ಇತರ ಗ್ರಾಮಗಳಲ್ಲಿರುವ ಇದೇ ರೀತಿಯ ವಂಚಿತ ಫಲಾನುಭವಿಗಳನ್ನು ಜೊತೆ ಸೇರಿಸಿ ಪ್ರತಿಭಟನೆಯ ಹಾದಿಹಿಡಿಯುವುದಾಗಿ ತಿಳಿಸಲಾಗಿದೆ.
ಫಲಾನುಭವಿಗಳಾದ ದೇಜಮ್ಮ, ಗೀತಾ, ಜಾನಕಿ,ಕುಸುಮಾ, ಲೀಲಾವತಿ, ಲೀಲಾವತಿ ಸೋಮನಾಥ, ಮೆಗ್ಡಲೆನ್ ಮಿರಾಂದಾ, ಮಾರ್ಗರೆಟ್ ಅನಿತಾ, ನಳಿನಾಕ್ಷಿ, ನಳಿನಿ, ಓಣೆದಿ, ಪ್ರೀತಿಕಾ, ಪ್ರೇಮಲತಾ, ರತ್ನಾವತಿ, ರುಕ್ಮಿಣಿ, ಶಾಜಿದಾ ಭಾನು, ಶೀಲಾ ಪಿಂಟೋ, ಸೂಕ್ಷ್ಮಾ, ಸ್ಟೆಲ್ಲಾ ಡಿಸೋಜಾ, ಸ್ಟೆಲ್ಲಾ ಪಿಂಟೋ, ಸುಲೋಚನಾ, ಸೂಕ್ಷ್ಮಾ, ಸುಂದರಿ, ವಸಂತಿ ಮತ್ತು ಝುಲೈಕಾ ಎಂಬವರೇ ಇದೀಗ ಇಂದು ವರ್ಷದಿಂದ ಸರಕಾರದ ಸೌಕಭ್ಯಕ್ಕಾಗಿ ಕಾಯುತ್ತಿರುವವರು. ಲಭ್ಯ ಮಾಹಿತಿ ಪ್ರಕಾರ ಇವರಿಗೆ ಸೌಲಭ್ಯ ಮಂಜೂರಾದ ಬಗ್ಗೆ ಫಲಾನುಭವಿಗಳಿಗೆ ಇದುವರೆಗೆ ಮಾಹಿತಿ ಕೂಡ ನೀಡಲಾಗಿಲ್ಲ. ಅಲ್ಲದೆ, ಮುಂದಕ್ಕೆ ದೊಡ್ಡ ಸಮಾವೇಶ ನಡೆಸಿ ಆ ವೇಳೆ ನಿಮ್ಮನ್ನು ಕರೆಯುತ್ತೇವೆ. ಅಲ್ಲೇ ನಿಮಗೆ ದೊರೆಯಕಿದೆ ಎಂದು ಕೆಲವರು ಹಿಂದೆ ಸಮಾಧಾನಪಡಿಸಿದ್ದಾರೆ ಎಂದೂ ಆಪಾದಿಸಲಾಗಿದೆ.
ಒಟ್ಟಾರೆ ಈ ಫಲಾನುಭವಿಗಳಿಗೆ ಬೆಸ್ಟ್ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದ್ದು ನ್ಯಾಯದೊರಕಿಸಿಕೊಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಮನವಿ ನೀಡುವ ವೇಳೆ ಬೆಸ್ಟ್ ಫೌಂಡೇಶನ್ ತಾಲೂಕು ಸಲಹೆಗಾರ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಲಾಯಿಲ ಘಟಕದ ಪ್ರಮುಖರಾದ ಮಧುಸೂಧನ್, ಸಲೀಂ ಆದರ್ಶನಗರ, ಉಮರ್ ಲಾಯಿಲ, ಸುರೇಶ್ ಪುತ್ರಬೈಲು, ದೇವರಾಜ್ ಪಡ್ಲಾಡಿ ಮೊದಲಾದವರು ಉಪಸ್ಥಿತರಿದ್ದರು