Posts

ಯುವ ಜನತಾದಳ ಅಧ್ಯಕ್ಷ ಸೂರಜ್ ವಳಂಬ್ರ ಗೌಡ ಬಿಜೆಪಿಗೆ ಸೇರ್ಪಡೆ

1 min read


ಬೆಳ್ತಂಗಡಿ; ತಾಲೂಕು ಜನತಾದಳ‌ ಜಾತ್ಯಾತೀತ ಪಕ್ಷದ ತಾಲೂಕು ಯುವ ವಿಭಾಗದ ಅಧ್ಯಕ್ಷರಾಗಿದ್ದ ಸೂರಜ್ ಗೌಡ ವಳಂಬ್ರ ಅವರು ತಮ್ಮ ಬೆಂಬಲಿಗರೊಂದಿಗೆ ರವಿವಾರ ಬಿಜೆಪಿಗೆ ಅಧಿಕೃತ ಸೇರ್ಪಡೆಗೊಂಡರು.

ಬೆಳ್ತಂಗಡಿ ಬಿಜೆಪಿ‌ ಮಂಡಲ‌ ಕಚೇರಿಯಲ್ಲಿ ನಡೆದ‌ ಸರಳ‌ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷ ಜಯಂತ ಕೋಟ್ಯಾನ್ ಸೂರಜ್ ಮತ್ತು ಅವರ ಬಳಗದವರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. 

 ವೇಳೆ ಗ್ರಾ.ಪಂ ಚುನಾವಣೆಯ ಕಡಿರುದ್ಯಾವರ ಪಂಚಾಯತ್ ಪ್ರಭಾರಿ,‌ ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ನಗರ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಸೀತಾರಾಮ ಬೆಳಾಲು,‌ ಶ್ರೀನಿವಾಸ ಗೌಡ, ಅಶೋಕ್ ಕುಮಾರ್, ಪ್ರಶಾಂತ್, ಮಹಾಬಲ ಗೌಡ ಬಂದಾರು, ಮೊದಲಾದವರು ಉಪಸ್ಥಿತರಿದ್ದರು.

ಸೂರಜ್ ಗೌಡ ಅವರು ತಾಲೂಕಿನ ಪ್ರತಿಷ್ಠಿತ ಮನೆತನಗಳಲ್ಲೊಂದಾದ ವಳಂಬ್ರ ಮನೆಯವರಾಗಿದ್ದು, ತಾ.ಪಂ ಮಾಜಿ ಅಧ್ಯಕ್ಷ ವಳಂಬ್ರ ನಾರಾಯಣ ಗೌಡರ ಕಿರಿಯ ಪುತ್ರರಾಗಿದ್ದಾರೆ.

ಸೇರ್ಪಡೆ ಬಳಿಕ‌ ಲೈವ್ ಮೀಡಿಯಾ ಜೊತೆ ಮಾತನಾಡಿ,‌ ಬೆಜೆಪಿ ಪಕ್ಷದ ಕಾರ್ಯವೈಖರಿ, ಶಾಸಕ‌ ಹರೀಶ್ ಪೂಂಜ ಅವರ ಕ್ರಿಯಾಶೀಲ ನಡೆ,‌ ತಾಲೂಕಿನಲ್ಲಿ‌ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿಗೆ ಸೇರುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment