ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಒಲ್ತ್ರೋಡಿ ನಿವಾಸಿ ದಿವಂಗತ ನಾರಾಯಣ ನಾಯ್ಕರ ಪತ್ನಿ, ವಿಧವೆ ಶಾಂತಾ ಅವರಿಗೆ ಹೊಸಮನೆ ನಿರ್ಮಾಣಕ್ಕೆ ರಾಜಕೇಸರಿ ಕೈ ಹಾಕಿದೆ.
ಗ್ರಾ.ಪಂ ಅನುದಾನದ ನೆರವಿನೊಂದಿಗೆ ಪೂರಕ ಹಣಕಾಸು ವ್ಯವಸ್ಥೆ ಸಂಘಟನೆ ಕಡೆಯಿಂದ ವ್ಯಯವಾಗಲಿದೆ. ಇದು ರಾಜಕೇಸರಿಯ 34 ನೇ ಗೃಹನಿರ್ಮಾಣ ಯೋಜನೆ.
ಡಿ. 6 ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಪರಿಣಿಬ್ಬಾಣ ದಿನದಂದು ಸಾಂಪ್ರದಾಯಿಕವಾಗಿ ಮನೆಯ ಒಡತಿ ಶಾಂತಾ ಅವರೇ ಕೆಸರುಕಲ್ಲು ಹಾಕಿ ತಳಪಾಯದ ಕೆಲಸ ಆರಂಭವಾಗಿದೆ.
ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ. ಅವರ ನೇತ್ರತ್ವದಲ್ಲಿ ನಡೆಯುತ್ತಿರುವ ಶ್ರಮಾದಾನದಲ್ಲಿ ತಾ. ಅಧ್ಯಕ್ಷ ಕಾರ್ತಿಕ್, ಕೋಶಾಧಿಕಾರಿ ಸಂತೋಷ್, ತಾ.ಸಂಚಾಲಕ ಪ್ರವೀಣ್ ಕುಲಾಲ್ , ಸಾಮಾಜಿಕ ಜಾಲತಾಣ ವಿಭಾಗದ ವಿನೋದ್ ಪೂಜಾರಿ, ತಾಲೂಕು ಮಾನವ ಸ್ಪಂದನ ತಂಡದ ಮುಖ್ಯಸ್ಥ ಪಿ.ಸಿ ಸೆಬಾಸ್ಟಿಯನ್ ಮುಂಡಾಜೆ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ರಾಜಕೇಸರಿ ಕಾರ್ಯಕರ್ತರಾದ ರಾಜೇಶ್, ಸಂತೋಷ್, ಸಂದೇಶ್, ನಾಗೇಶ್ ಬಿ, ಸುಮಂತ್, ಉಮೇಶ್, ಮೊದಲಾದವರು ಭಾಗಿಯಾಗಿದ್ದರು.
ಗ್ರಾಮದ ಬೀಟ್ ಪೊಲೀಸ್ ಸುನೀತಾ ಉಪಸ್ಥಿತರಿದ್ದರು. ಶಿಲಾನ್ಯಾಸಕ್ಕೆ ಪಂಚಲೋಹಗಳನ್ನು ಶುಭ ಜ್ಯುವೆಲ್ಲರಿಯ ಶುಭಾಶ್, ಮನೆಯ ನೀಲಿ ನಕಾಶೆಯನ್ನು ಇಂಜಿನಿಯರ್ ಶೈಲೇಶ್ ಅವರು ರಚಿಸಿಕೊಟ್ಟು ಸಹಕರಿಸಿದರು.