ಬೆಳ್ತಂಗಡಿ; ಬೆಳ್ತಂಗಡಿ ಸೋಮಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಾಲೇಜಿನ ವಿದ್ಯಾರ್ಥಿ ಸಮರ್ಥ್ (16) ಎಂಬವರೇ ಮೃತರಾದವರು ಎಂದು ತಿಳಿದು ಬಂದಿದೆ. ಇವರು ಮೂಡಿಗೆರೆ ಮೂಲದವರೆಂದು ತಿಳಿದು ಬಂದಿದ್ದು, ಬೆಳ್ತಂಗಡಿ ಪಿಜಿಯೊಂದರಲ್ಲಿ ವಾಸ್ತವ್ಯಹೂಡಿದ್ದರೆಂದು ವಿದ್ಯಾರ್ಥಿಗಳು ಮಧ್ಯಾಹ್ನದ ವರೆಗೆ ದ್ವಿತೀಯ ಪಿಯುಸಿ ಯವರಿಗೆ ಪರೀಕ್ಷೆ ನಡೆಯುತ್ತಿದ್ದುದರಿಂದ ಅಪಾರಾಹ್ನ 1.30 ಕ್ಕೆ ತರಗತಿಗೆ ಹಾಜರಾಗಬೇಕಿತ್ತು. ಆದರೆ ಇವರು ಬೆಳಿಗ್ಗೆಯೇ ಪಿಜಿ ಯಿಂದ ಆಗಮಿಸಿದ್ದು ನದಿಗೆ ಸ್ನಾನಕ್ಕೆ ಇಳಿದಿದ್ದರೆಂದು ತಿಳಿದುಬಂದಿದೆ. ನದಿಯಲ್ಲಿ ಮುಳುಗಿದ ಮಿತ್ರನನ್ನು ಕಾಣದಾದಾಗ ಜೊತೆಗಿದ್ದ ಅವರ ಮಿತ್ರ ಪಿಜಿ ಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
------
ಅಚ್ಚು ಮುಂಡಾಜೆ, ಪ್ರಿನ್ಸಿಪಲ್ ಎಡಿಟರ್, ಲೈವ್ ಮೀಡಿಯಾ ಟೀಮ್: 9449640130