ಬೆಳ್ತಂಗಡಿ; ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಇದರ 5ನೇ ವಾರ್ಷಿಕೋತ್ಸವ ಹಾಗೂ ಶೈಖುನಾ ಶಂಸುಲ್ ಉಲಮಾ (ಖ.ಸಿ) ಆಂಡ್ ನೇರ್ಚೆ ಕಾರ್ಯಕ್ರಮವು ನವೆಂಬರ್ 26,27,28 ದಿನಾಂಕಗಳಲ್ಲಿ ಬೆಳ್ತಂಗಡಿ ದಾರುಸ್ಸಲಾಂ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ವಹಿಸಿದ್ದರು. ಶೈಖುನಾ ಅಲ್ ಹಾಜ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಯ್ಯಿದ್ ಜಿಫ್ರಿ ಸೀದಿ ಕುಂಞಿ ಕೋಯ ತಂಙಳ್ ಮಲಪ್ಪುರಂ, ಹನೀಫ್ ಫೈಝಿ ಬೆಳ್ತಂಗಡಿ ಶುಭ ಹಾರೈಸಿದರು.
ವಲಿಯುದ್ದೀನ್ ಫೈಝಿ ಉಸ್ತಾದರ ನೇತೃತ್ವದಲ್ಲಿ ಅಝ್ಕಾರುಲ್ ಮಸಾಹ್ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ 10 ರಿಂದ ಆರಂಭಗೊಂಡ ಆಂಡ್ ನೇರ್ಚೆ, ಮಜ್ಲಿಸುನ್ನೂರ್ ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಸಯ್ಯಿದ್ ತ್ವಾಹ ಜಿಫ್ರಿ ತಂಙಳ್, ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಸಯ್ಯಿದ್ ಅಕ್ರಂ ಅಲೀ ತಂಙಳ್, ಸಯ್ಯಿದ್ ಅಫ್ಹಾಂ ತಂಙಳ್, ಕೆ.ಸಿ ರೋಡ್, ಇಬ್ರಾಹಿಂ ಬಾಖವಿ, ಶಂಸುದ್ದೀನ್ ಅಶ್ರಫಿ ಕಕ್ಕಿಂಜೆ, ಮೂಸಾ ದಾರಿಮಿ ಕಕ್ಕಿಂಜೆ, ಇಲ್ಯಾಸ್ ಅಝ್ಹರಿ, ನಝೀರ್ ಅಝ್ಹರಿ ಉಪ್ಪಿನಂಗಡಿ, ಇರ್ಷಾದ್ ದಾರಿಮಿ ಮಿತ್ತಬೈಲ್, ಶರೀಫ್ ಫೈಝಿ ಕಡಬ, ಅಶ್ರಫ್ ಫೈಝಿ ಮಿತ್ತಬೈಲ್, ರಿಯಾಝ್ ರಹ್ಮಾನಿ ಪಡ್ಡಂದಡ್ಕ, ಶಂಸುದ್ದೀನ್ ದಾರಿಮಿ ಕನ್ನಡಿಕಟ್ಟೆ, ಹಾಫಿಳ್ ಸಿದ್ದೀಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಅಹ್ಮದ್ ಬಾವ ಸಾಗರ್ ಮಿತ್ತಬೈಲ್, ದುಬೈ ಸಮಿತಿಯ ರಫೀಕ್ ಆತೂರ್, ನೌಶಾದ್ ಫೈಝಿ, ನೂರ್ ಮುಹಮ್ಮದ್ ನೀರ್ಕಾಜೆ, ಡಾ. ಸಿದ್ದೀಕ್ ಅಡ್ಡೂರು, ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಬಿ.ಎ ನಝೀರ್ ಬೆಳ್ತಂಗಡಿ, ಅಶ್ರಫ್ ಮರೋಡಿ, ನೌಶಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ ಹಮೀದ್ ಅಡ್ಯಾರ್ ಕಣ್ಣೂರು, ಹನೀಫ್ ದೂಮಳಿಕೆ, ಯು.ಕೆ. ಮೋನು ಕಕ್ಕಿಂಜೆ, ಅಬ್ದುಲ್ ಅಝೀಝ್, ಬಿ.ಎಚ್ ಮುಹಮ್ಮದ್ ಬೆಳ್ತಂಗಡಿ, ಆದಂ ದಾರಿಮಿ ಅಜ್ಜಿಕಟ್ಟೆ, ಆದಂ ದಾರಿಮಿ ಕೊಡಾಜೆ, ಎಂ. ಎಸ್. ಮುಹಮ್ಮದ್ ಕಾಸರಗೋಡು, ಹಾಶಿಂ ವಲಿಮಣ್ಣ, ರಿಯಾಝ್ ಫೈಝಿ ಕಕ್ಕಿಂಜೆ, ಅಬ್ಬಾಸ್ ಫೈಝಿ ದಿಡುಪೆ, H.M ಹಸನಬ್ಬ ಮದ್ದಡ್ಕ, ಯಾಕೂಬ್ ಮುಸ್ಲಿಯಾರ್ ಗುರುವಾಯನಕರೆ, ಹಾಜಿ ಅಬ್ದುಲ್ ಲತೀಫ್ ಗುರುವಾಯನಕೆರೆ, ಇಸ್ಮಾಯಲ್ ಹಾಜಿ ಮಾಹಿ, ನವಾಝ್ ಮಾಹಿ, ಕಾಸಿಂ ಹಾಜಿ ಮಾಹಿ, ಅಬೂಬಕ್ಕರ್ ಮಾಹಿ, ಜಾಬಿರ್ ಫೈಝಿ ಬನಾರಿ, ಹಾಜೀ ಹಾರಿಸ್ ಐ.ಜೆ, ಹಕೀಂ ಬಂಗೇರುಕಟ್ಟೆ, ವಿ.ಎ ರಹ್ಮಾನ್ ಸುನ್ನತ್ ಕೆರೆ, ಬಶೀರ್ ವಗ್ಗ, ಖಲಂದರ್ ದಾವೂದ್ ಹಾಜಿ, ಹೈದರ್ ಮಾಸ್ಟರ್ ಅಲ್ಲದೆ ಸಂಸ್ಥೆಯ ಪದಾಧಿಕಾರಿಗಳು, ಕಾಲೇಜಿನ ಅಧ್ಯಾಪಕ ವೃಂದದವರು ಸೇರಿ ಹಲವಾರು ಗಣ್ಯರು ಭಾಗವಹಿಸಿದ್ದರು.
ಈ ಸಂಧರ್ಭ ದಾರುಸ್ಸಲಾಂ ಯುಎಇ ಸಮಿತಿ ನೀಡಿದ ವಾಹನವನ್ನು ಸಂಸ್ಥೆಗೆ ಹಸ್ತಾಂತರಿಸಲಾಯಿತು.
ಬಶೀರ್ ದಾರಿಮಿ ಸ್ವಾಗತಿಸಿ, ನೌಶಾದ್ ಪಡ್ಡಂದಡ್ಕ, ಸಿರಾಜ್ ಚಿಲಿಂಬಿ, ಸಿನಾನ್ ಹುದವಿ ಕಾರ್ಯಕ್ರಮ ನಿರೂಪಿಸಿದರು.