Posts

ಡಿ.5 (ಇಂದು) ಜಮೀಯತುಲ್ ಫಲಾಹ್ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ

1 min read

ಬೆಳ್ತಂಗಡಿ; ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕ ಇದರ ವತಿಯಿಂದ ಅನ್ಸಾರುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿಯೇಷನ್ ಸುನ್ನತ್‌ಕೆರೆ ಹಾಗೂ ಇಂಡಿಯಾನ ಆಸ್ಪತ್ರೆ ಪಂಪ್ವೆಲ್ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರಿನ ಖ್ಯಾತ ಹೃದಯರೋಗ ತಜ್ಞ ಡಾ. ಯೂಸುಫ್ ಕುಂಬ್ಲೆ ಇವರ ನೇತೃತ್ವದಲ್ಲಿ ಡಿ.5 ರಂದು (ಇಂದು ರವಿವಾರ) ಸುನ್ನತ್‌ಕೆರೆ ಮದರಸ ಸಭಾಂಗಣದಲ್ಲಿ ಬೃಹತ್ ಉಚಿತ ವೈದ್ಯಕೀಯ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್‌ ಲತೀಫ್ ಸಾಹೇಬ್ ಕೊಲ್ಪೆದಬೈಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಈ ಉಚಿತ ವೈದ್ಯಕೀಯ ಶಿಬಿರದಲ್ಲಿ ಹೃದಯರೋಗ, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಕಣ್ಣು ಪರೀಕ್ಷೆ, ಸಾಮಾನ್ಯ ರೋಗ ವಿಭಾಗ, ಸ್ತ್ರೀರೋಗ ತಜ್ಞರು, ನರರೋಗ ತಜ್ಞರು, ದಂತ ಚಿಕಿತ್ಸೆ ಮೊದಲಾದ ವಿಭಾಗದ ತಜ್ಞ ವೈದ್ಯರುಗಳು ಆಗಮಿಸಲಿದ್ದಾರೆ. ಈ ಶಿಬಿರದಲ್ಲಿ ಇಕೋ ಪರೀಕ್ಷೆ, ಇಸಿಜಿ, ಮಧುಮೇಹ ತಪಾಸನೆ, ರಕ್ತದೊತ್ತಡ ಪರೀಕ್ಷೆ ಕೂಡ ಉಚಿತವಾಗಿ ಮಾಡಿಸಿಕೊಳ್ಳಬಹುದಾಗಿದೆ. ಎಲ್ಲಾ ಜಾತಿ ಧರ್ಮದವರೂ ಮುಕ್ತವಾಗಿ  ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ತಜ್ಞ ವೈದ್ಯರುಗಳಾದ ಡಾ. ಪ್ರಚೀ ಶರ್ಮ, ಡಾ.‌ಭರತೇಶ್, ಡಾ. ಆದಿತ್ಯ ಭಾರಧ್ವಾಜ್, ಡಾ.‌ಅಜಯ್ ಕುಮಾರ್, ಡಾ.ಅರುಣ್ ವಿ, ಡಾ.  ಝುಲ್ಫಿಯಾ ಶಬ್ನಂ, ಡಾ. ಶುಭಾ ಡಿ, ಡಾ. ಸಫ್ವಾನ್ ಅಹ್ಮದ್, ಡಾ.ಸ್ಮೃತಿ, ಡಾ.‌ಮೇಘನಾ ಇವರುಗಳ ತಂಡವೇ  ಅಂದು ಗುರುವಾಯನಕೆರೆ  ಶಿಬಿರಕ್ಕೆ ಆಗಮಿಸಿ ಅರ್ಹರ ಉಚಿತ ತಪಾಸಣೆ, ಕೌನ್ಸಿಲಿಂಗ್, ಸೂಕ್ತ ಔಷಧಿ ನೀಡಲಿದ್ದಾರೆ.

ಇಂಡಿಯಾನ ಆಸ್ಪತ್ರೆಯ ಪ್ರಖ್ಯಾತ ಹೃದಯ ತಜ್ಞ ವೈದ್ಯ ಡಾ. ಯೂಸುಫ್ ಕುಂಬ್ಲೆ ಅವರು ಇದೇ ಮೊದಲ ಬಾರಿಗೆ ಗುರುವಾಯನಕೆರೆಯ ಈ ಶಿಬಿರಕ್ಕೆ ಆಗಮಿಸುತ್ತಿದ್ದು ಅವರನ್ನು ಜಮೀಯತುಲ್ ಫಲಾಹ್ ವತಿಯಿಂದ ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಶಿಬಿರದಲ್ಲಿ ಪರೀಕ್ಷೆ ನಡೆಸುವ ವೇಳೆ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಆವಶ್ಯವಿದ್ದಲ್ಲಿ ಮಂಗಳೂರು ಆಸ್ಪತ್ರೆಗೆ ಪಾಸ್ ನೀಡಲಾಗಿ ಅಲ್ಲಿ ಚಿಕಿತ್ಸೆ ಯಲ್ಲಿ ಶೇ. 25 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಶಿಬಿರ ಆರಂಭಕ್ಕೂ ಮುನ್ನ ಯಾವುದೆ ಸಭಾ ಕಾರ್ಯಕ್ರಮ ಇರೂವುದಿಲ್ಲ. ಸಾಂಕೇತಿಕವಾಗಿ ಉದ್ಘಾಟನೆ ನಡೆಸಿ ನೇರವಾಗಿ ವೈದ್ಯಕೀಯ ಪರೀಕ್ಷೆಗಳು ಆರಂಭವಾಗಲಿದೆ.

ಶಿಬಿರಕ್ಕೆ ಆಗಮಿಸಬಯಸುವವರು ಹೆಚ್ಚಿನ ಮಾಹಿತಿಗಾಗಿ ಹೈದರ್ ನೀರ್ಸಾಲ್ 9448328372, ಅಬ್ಬೋನು ಮದ್ದಡ್ಕ 9900799781, ಖಲಂದರ್ ಬಿ.ಹೆಚ್ 9945417386, ಇಸ್ಹಾಕ್ ಸುನ್ನತ್‌ಕೆರೆ 7760093451 ಇವರಿಗೆ ಕರೆ ಮಾಡಿ‌ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment