Posts

ಬೆಳ್ತಂಗಡಿಯ ಸಾಂತೋಮ್ ಟವರ್‌ನಲ್ಲಿ ಮಕ್ಕಳ‌‌ ವಸ್ರ್ತಗಳ ವಿಶೇಷ ಮಳಿಗೆ ಬೇಬಿ ಝೋನ್ ಶುಭಾರಂಭ,

1 min read

ಬೆಳ್ತಂಗಡಿ; ಇಲ್ಲಿನ ಬಸ್ಟ್ಯಾಂಡ್‌ನ ಎದುರುಗಡೆ ಇರುವ ಸಾಂತೋಮ್ ಟವರ್ ವಾಣಿಜ್ಯ ಮಳಿಗೆಯಲ್ಲಿ 10  ವರ್ಷಗಳ ಒಳಗಿನ ಮಕ್ಕಳ ನವನವೀನ ಉಡುಪುಗಳ ವಿಶೇಷ ಪ್ರದರ್ಶನ ಮತ್ತು ಮಾರಾಟ ಮಳಿಗೆ ಬೇಬಿ ಝೋನ್ ಸೋಮವಾರ ಶುಭಾರಂಭಗೊಂಡಿತು.

ಮಳಿಗೆಯ ಮಾಲಕರ ತಂದೆಯವರಾದ ಶೇಕ್ ಮುಹಮ್ಮದ್ ಚಾರ್ಮಾಡಿ ಅವರು ರಿಬ್ಬನ್ ಕತ್ತರಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.



ಡಿಕೆಆರ್‌ಡಿಎಸ್ ಸಂಸ್ಥೆಯ ನಿರ್ದೇಶಕ ಫಾ.‌ಬಿನೊಯ್ ಎ.ಜೆ, ವಾಣಿಜ್ಯ ಮಳಿಗೆಯ ವ್ಯವಸ್ಥಾಪಕ ಬಾಬು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಹೆಚ್, ಇಂಜಿನಿಯರ್ ಮಹಾವೀರ ಆರಿಗಾ, ಅನುಗ್ರಹ ಜನಸೇವಾ ಕೇಂದ್ರದ ಮುಖ್ಯಸ್ಥ ತಲ್‌ಹತ್ ಎಂ.ಜಿ, ಇಮೇಜ್ ಮೊಬೈಲ್‌ ಮಾಲಿಕ ಮುಹಮ್ಮದ್ ಹರ್ಷದ್ ನಾವೂರು, ಅನುಗ್ರಹ ಸ್ಕೂಲ್ ಬುಕ್ ಕಂಪೆನಿಯ ಮಾಲಿಕ ಅಶ್ರಫ್ ಫೈಝಿ,ಆಪದ್ಬಾಂಧವ ಚಾರ್ಮಾಡಿ ಹಸನಬ್ಬ, ಯುವ ನ್ಯಾಯವಾದಿ ನವಾಝ್ ಶರೀಫ್ ಕಕ್ಕಿಂಜೆ, ಪ್ರಮುಖ ಗಣ್ಯರಾದ ಮೆಹಬೂಬ್ ಸಂಜಯನಗರ, ಅಬ್ಬೋನು ಮದ್ದಡ್ಕ, ಮೂಸೆ ಕಲ್ಕಾರ್, ಮುಹಮ್ಮದ್ ಅಸ್ಲಂ ಚಾರ್ಮಾಡಿ, ನಿಝಾಮುದ್ದೀನ್, ನಾಸಿರ್ ಮುಹಮ್ಮದ್, ಮುಹಮ್ಮದ್ ಇಕ್ಬಾಲ್, ಸಿರಾಜುದ್ದೀನ್, ಮುಹಮ್ಮದ್ ಅಲ್ತಾಫ್, ಸಲೀಂ ಅಹಮ್ಮದ್, ಅಭಿಜಿತ್ ಬೆಳ್ತಂಗಡಿ  ಮೊದಲಾದವರು ಭಾಗಿಯಾಗಿದ್ದರು.


ನೂತನ ಮಳಿಗೆಯಲ್ಲಿ ಹುಟ್ಟಿನಿಂದ 10 ವರ್ಷಗಳ ಒಳಗಿನ ಮಕ್ಕಳ ಎಲ್ಲಾ ರೀತಿಯ ವಸ್ರ್ತಗಳು, ಜೀನ್ಸ್ ಮತ್ತು ಇತರ, ಬ್ರಾಂಡೆಡ್ ಮತ್ತು ಮೀಡಿಯಂ ಬ್ರಾಂಡೆಡ್ ವಸ್ರ್ತಗಳ ವಿಶೇಷ ಸಂಗ್ರಹವಿದೆ. 
ಮಳಿಗೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ತೆರೆದಿರುತ್ತದೆ.

ಮಳಿಗೆಯ ಮಾಲಕರಾದ ಶಾಹುಲ್ ಹಮೀದ್ ಚಾರ್ಮಾಡಿ ಅವರು ಮಂಗಳೂರಿನಲ್ಲಿ ವ್ಯವಹಾರ ನಡೆಸಿದ ಅನುಭವಿಯಾಗಿದ್ದಾರೆ. ಅವರ ಸಹೋದರ, ಮಂಗಳೂರಿನಲ್ಲಿ ಕಳೆದ 8 ವರ್ಷಗಳಿಂದ ಬೇಬಿ ಶಾಪ್ ನಲ್ಲಿ ಮಾರ್ಕೆಟಿಂಗ್ ಮತ್ತು ಮೆನೇಜರ್ ಆಗಿ ಅನುಭವ ಹೊಂದಿರುವ ದಾವೂದುಲ್ ಹಕೀಂ ಇವರುಗಳು ಎಲ್ಲಾ ಆಹ್ವಾನಿತ ಗಣ್ಯರನ್ನು  ಬರಮಾಡಿಕೊಂಡು ಗೌರವಿಸಿದರು.


ಮಕ್ಕಳ ವಸ್ರ್ತಗಳು ಮಾತ್ರ ಇರುವ ಬೆಳ್ತಂಗಡಿ ನಗರದ ಮೊದಲ ಮಳಿಗೆಯಾಗಿರುವ ಈ ಮಳಿಗೆಗೆ ಎಲ್ಲರ ಸಹಕಾರವನ್ನು ಯಾಚಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment