Posts

ಕಿಲ್ಲೂರಿನಲ್ಲಿ ಎಸ್ಸೆಸ್ಸೆಫ್ ದ್ವಜ ದಿನ; ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

0 min read

ಬೆಳ್ತಂಗಡಿ:  ಎಸ್ಸೆಸ್ಸೆಫ್ ಧ್ವಜ ದಿನದ ಅಂಗವಾಗಿ ಕಿಲ್ಲೂರು ಶಾಖೆಯ ವತಿಯಿಂದ ಧ್ವಜಾರೋಹಣ ಮತ್ತು ಬೆಳ್ತಂಗಡಿ ಸಮುದಾಯ ಆಸ್ವತ್ರೆಯಲ್ಲಿರುವ ಎಲ್ಲಾ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ನಡೆಸಲಾಯಿತು.

ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಕಿಲ್ಲೂರು ಇದರ ಅಧ್ಯಕ್ಷ ಮುಹಮ್ಮದ್,  ಎಸ್ಸೆಸ್ಸೆಫ್ ಕಿಲ್ಲೂರು ಯುನಿಟ್ ಅಧ್ಯಕ್ಷ ಆಶಿಕ್ ಜಂಟಿಯಾಗಿ ದ್ವಜಾರೋಹಣ ನೆರವೇರಿಸಿದರು.

ಸ್ಥಳೀಯ ಮುದರ್ರಿಸ್ ರಫೀಕ್ ಸಅದಿ ಅಳಕೆಮಜಲ್ ದುಃಅ ನಿರ್ವಹಿಸಿದರು.ಜಮಾಅತ್ ಪ್ರದಾನ ಕಾರ್ಯದರ್ಶಿ  ಕಾಸಿಮ್ ಮಲ್ಲಿಗೆಮನೆ,  ಅಬ್ದುರಹ್ಮಾನ್ ಮುಸ್ಲಿಯಾರ್ ಆಶಂಶ ಭಾಷಣ ಮಾಡಿದರು, ಜಮಾಅತ್ ಉಪಾಧ್ಯಕ್ಷ ಅಬೂಬಕ್ಕರ್ ಮಲ್ಲಿಗೆ, ಹಂಝತ್ ಕಿಲ್ಲೂರು, ಎಸ್ಸೆಸ್ಸೆಫ್ ಕೋಶಾಧಿಕಾರಿ ಅಶ್ರಫ್ ಕಿಲ್ಲೂರು, ಯುನಿಟ್ ಸದಸ್ಯರಾದ ಸಈದ್ ಮುಈನಿ, ಮನ್ಸೂರು ಸಅದಿ, ಆಶಿಕ್ ಮುಈನಿ, ಬದ್ರುದ್ದೀನ್ ಮದನಿ ಕಿಲ್ಲೂರು, ಹಾಗೂ ಪದಾಧಿಕಾರಿಗಳು, ಸದಸ್ಯರು‌. ಜಮಾಅತ್ಆಡಳಿತ ಮಂಡಳಿ, ಮತ್ತು ಅಂಗ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು  ಊರಿನ ಹಿರಿಯರು ಜಮಾಅತ್ ಬಾಂದವರು ಭಾಗವಹಿಸಿದ್ದರು,

ಎಸ್ಸೆಸ್ಸೆಫ್ ಕಾರ್ಯದರ್ಶಿ ಅಲ್ತಾಫ್ ಕಿಲ್ಲೂರು ಸ್ವಾಗತಿಸಿ.

ಅಬ್ದುಲ್ ಅಝೀಝ್ ಝುಹ್'ರಿ ಕಿಲ್ಲೂರು ಪ್ರಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ  ದನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment