Posts

ಎಸ್ ಡಿ ಪಿ ಐ ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಸರಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

1 min read

ಬೆಳ್ತಂಗಡಿ; ಕೋವಿಡ್ 19 ಮಾರಕ ರೋಗದಿಂದ ಸ್ಥಗಿತಗೊಂಡಿದ್ದ ಶಾಲೆಯು ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದ್ದು, ಅ ನಿಟ್ಟಿನಲ್ಲಿ ಗುರುವಾಯನಕೆರೆ ಪಿಲಿಚಂಡಿಕಲ್ಲು ಸರಕಾರಿ ಶಾಲಾ ಆವರಣವು ಸಂಪೂರ್ಣ ಪೊದೆಗಳಿಂದ ಮಲಿನವಾಗಿದ್ದುದನ್ನು ಮನಗಂಡ ಎಸ್ ಡಿಪಿಐ ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಸ್ವಚ್ಚಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫಾ ಜಿ.ಕೆ ,ಸಮೀರ್ ಎಸ್ ಕೆ, ಎಸ್ ಡಿ ಪಿ ಐ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ದಾವೂದ್ ಜಿ.ಕೆ,  ಕಾರ್ಯದರ್ಶಿ ಕಲಂದರ್ ಬಿ ಎಚ್,ಉಪಾದ್ಯಕ್ಷರಾದ ಅಶ್ರಪ್ ಎಸ್ ಕೆ ,ಎಸ್ ಡಿ ಪಿ ಐ ಸುನ್ನತುಕೆರೆ ವಾರ್ಡ್ ಅಧ್ಯಕ್ಷರಾದ ಇಸಾಕ್ ಪಿ ಎಸ್ ಕೆ , ಕಾರ್ಯದರ್ಶಿ ಖಲಂದರ್  ಅಂಗಡಿ, ಕೋಶಾಧಿಕಾರಿ ಅಲ್ತಾಫ್ ಎಸ್ ಕೆ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.

ಈ ಒಂದು ಶ್ರಮದಾನಕ್ಕೆ ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ಹಕೀಮ್ ಸುನ್ನತ್ ಕೆರೆ ಹಾಗು ಶಾಲಾ ಮುಖ್ಯೋಪಾದ್ಯಾಯರು ಮತ್ತು  ಶಿಕ್ಷಕವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದರು. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment