ಬೆಳ್ತಂಗಡಿ; ಎಸ್ಸೆಸ್ಸೆಫ್ ಕಾಜೂರ್ ಯುನಿಟ್ ವತಿಯಿಂದ ಸಂಘಟನೆಯ ಎಸ್ಸೆಸ್ಸೆಫ್ ಧ್ವಜ ದಿನಾಚರಣೆ ಮತ್ತು ಬೇಕಲ್ ಉಸ್ತಾದ್ ಸ್ಮರಣೆ ಕಾರ್ಯಕ್ರಮ ರವಿವಾರ ನಡೆಸಲಾಯಿತು.
ದರ್ಗಾ ಅಧ್ಯಕ್ಷ ಜನಾಬ್ ಕೆ ಯು ಇಬ್ರಾಹಿಂ ದ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು. ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ ಹೆಚ್, ಕೋಶಾಧಿಕಾರಿ ಮುಹಮ್ಮದ್ ಕಮಾಲ್, ಸದರ್ ಉಸ್ತಾದ್ ರಶೀದ್ ಮದನಿ, ಮಲವಂತಿಗೆ ಗ್ರಾ. ಪಂ. ಸದಸ್ಯ ಕೆ ಯು ಮುಹಮ್ಮದ್, ಮಿತ್ತಬಾಗಿಲು ಗ್ರಾ.ಪಂ ಸದಸ್ಯ ಅಹಮದ್ ಕಬೀರ್, ಎಸ್ಸೆಸ್ಸೆಫ್ ಯುನಿಟ್ ಅಧ್ಯಕ್ಷ ಸಿರಾಜ್ ಕಾಜೂರ್, ಎಸ್.ವೈ.ಎಸ್ ಉಪಾಧ್ಯಕ್ಷ ಪಿ. ಎ ಮೊಹಮ್ಮದ್, ಎಸದ.ಎಮ್.ಎ ಜಿಲ್ಲಾ ಸಹ ಕಾರ್ಯದರ್ಶಿ ಕೆ. ಪಿ ಮುಹಮ್ಮದ್, ಕೆಡಿಸಿ ಪದಾಧಿಕಾರಿಗಳಾದ ಇಬ್ರಾಹಿಂ, ಮೊಯಿದು ಹಾಜಿ, ಕಾಜೂರ್ ಪ್ರೌಢ ಶಾಲೆ ಪಿಟಿಎ ಅಧ್ಯಕ್ಷ ಬಿವೈ ಉಮರ್ ಕುಕ್ಕಾವು, ಮದರಸ ಪೋಷಕರ ಸಮಿತಿ ಅಧ್ಯಕ್ಷ ಪಿಎ ರಾಝಿಕ್, ಜಿ ನಗರ ಆಡಳಿತ ಸಮಿತಿ ಅಧ್ಯಕ್ಷ ಉಸ್ಮಾನ್ ಪಗರೇ ,ಎಸ್‌ವೈಎಸ್ ಪದಾಧಿಕಾರಿಗಳು ಸದಸ್ಯರು ಹಾಗೂ ಎಸ್ಸೆಸ್ಸೆಫ್ ಯುನಿಟ್ ಪದಾಧಿಕಾರಿಗಳು, ಸದಸ್ಯರು. ದರ್ಗಾ ಆಡಳಿತ ಮಂಡಳಿ, ಮತ್ತು ಅಂಗ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಊರಿನ ಹಿರಿಯರು ಜಮಾಅತ್ ಬಾಂದವರು ಭಾಗವಹಿಸಿದ್ದರು.
ಶಾಖಾ ಸಕ್ರಿಯ ಕಾರ್ಯಕರ್ತ ನವಾಜ್ ನೆಲ್ಲಿಗುಡ್ಡೆ ಉದ್ಯೋಗ ನಿಮಿತ್ತ ವಿದೇಶ ಪ್ರವಾಸ ಹೋಗುವುದರಿಂದ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಶೈಖುನಾ ತಾಜುಲ್ ಫುಕಹಾಅ್ ಬೇಕಲ ಉಸ್ತಾದ್ ಅನುಸ್ಮರಣೆ ಮಾಡಲಾಯಿತು. ಶಾಖಾ ಪ್ರ. ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ದನ್ಯವಾದವಿತ್ತರು.