ಬೆಳ್ತಂಗಡಿ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಧೀನ ಸಂಸ್ಥೆ ನೂರುಲ್ ಹುದಾ ಅರ್ರಿಫಾಯಿಯ್ಯಾ ಮದರಸ ಕಾಜೂರು ಇದರ ಪೋಷಕರ ಮತ್ತು ಶಿಕ್ಷಕರ ಸಭೆಯು ಕಾಜೂರ್ ಸಮುದಾಯ ಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾ ಅಧ್ಯಕ್ಷ ಕೆ ಯು ಇಬ್ರಾಹಿಂ ವಹಿಸಿದ್ದರು. ವೇದಿಕೆಯಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ JH, ಸದರ್ ಉಸ್ತಾದ್ ರಶೀದ್ ಮದನಿ, ಆಸೀಫ್ ಮದನಿ, ಇಕ್ಬಾಲ್ ಮುಸ್ಲಿಯಾರ್,JH ಅಬ್ಬಾಸ್, SMA ಜಿಲ್ಲಾ ಕಾರ್ಯದರ್ಶಿ KP ಮೊಹಮ್ಮದ್ G ನಗರ ಉಪಸ್ಥಿತರಿದ್ದರು
ನೂರುಲ್ ಹುದಾ ರಿಫಾಯಿಯ್ಯ ಮದರಸ ಮಕ್ಕಳ ಪೋಷಕರು ಈ ಸಭೆಯಲ್ಲಿ ಬಾಗವಿಸಿದ್ದರು.
SMA ಜಿಲ್ಲಾ ಕಾರ್ಯದರ್ಶಿ KP ಮೊಹಮ್ಮದ್ ರವರಿಗೆ ಆಡಳಿತ ಸಮಿತಿ ಅಧ್ಯಕ್ಷರಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು
ಮುಂದಿನ ವರುಷದ ಪೋಷಕರ ಸಮಿತಿಗೆ ಅಧ್ಯಕ್ಷರಾಗಿ PA ರಾಝಿಕ್, ಉಪಾಧ್ಯಕ್ಷರಾಗಿ ರಂಲಾ (ಮಮ್ಮು), ಸದಸ್ಯರಾಗಿ ಅಬ್ದುಲ್ ಜಬ್ಬಾರ್, ಉಮರ್ ಕು0ಞ KH , ಮುಹಮ್ಮದ್ ದರ್ಕಾಸ್ , ಸಂಶುದ್ದಿನ್ ಕಾಜೂರ್ , ಕಬೀರ್ ಕೆಳಗಿನ ಮನೆ ಅವರುಗಳನ್ನು ಅವಿರೋದವಾಗಿ ಆಯ್ಕೆ ಮಾಡಲಾಯಿತು. ಸದರ್ ಉಸ್ತಾದ್ ಧನ್ಯವಾದ ಮಾಡಿದರು.