Posts

ಪಿಯುಸಿ‌ ಮುಗಿಸಿ ಸಿಇಟಿ ತರಬೇತಿ ನಡೆಸುತ್ತಿದ್ದಾಕೆ ನಾಪತ್ತೆ. ಪ್ರಿಯಕರನ ಜೊತೆ ಹೋಗಿರುವ ಬಗ್ಗೆ ತಾಯಿಯಿಂದಲೇ ಶಂಕೆ!

0 min read

ಬೆಳ್ತಂಗಡಿ; ಉಜಿರೆ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದುಕೊಂಡು ಸಿಇಟಿ ಪರೀಕ್ಷೆಯ ಬಗ್ಗೆ ತಯಾರು ನಡೆಸುತ್ತಿದ್ದ ಯುವತಿಯೊಬ್ಬಳು ಆ. 6 ರಂದು ಬೆಳಗ್ಗಿನಿಂದ ನಾಪತ್ತೆಯಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಹೀಗೇ ಕಾಣೆಯಾಗಿರುವಾಕೆಯನ್ನು ಬೆಳ್ತಂಗಡಿ ಚರ್ಚ್ ಕ್ರಾಸ್, ಸಿವಿಸಿ ಹಾಲ್ ಪಕ್ಕದ ನಿವಾಸಿನಿ ಆಸೀನಾ ತೋಮಸ್(18ವ.) ಎಂಬವರೆಂದು ಗುರುತಿಸಲಾಗಿದೆ. ಈ ಸಂಬಂಧ ಅವರ ತಾಯಿ ಮೋಳಿ ಸೋಬಿನ್  ಅವರು ಬೆಳ್ತಂಗಡಿ ಠಾಣೆಗೆ‌ ದೂರು‌ ನೀಡಿದ್ದಾರೆ.‌

ಪ್ರಿಯಕರನ ಜೊತೆ ಓಡಿಹೋಗಿರುವ ಶಂಕೆ;

ಕಲಿಕೆಯ ಮಧ್ಯೆ ಆಕೆಯು ಬೆದ್ರಬೆಟ್ಟು ಎಂಬಲ್ಲಿಯ ಹುಡುಗನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ತುಂಬಾ ಸಲುಗೆಯಿಂದ ಇರುತ್ತಿದ್ದವಳು ಆತನ‌ ಜೊತೆಗೇ ಓಡಿಹೋಗಿರುವ ಸಾಧ್ಯತೆ ಇದೆ ಎಂದು ಆಕೆಯ ತಾಯಿ ನೀಡಿದ ದೂರಿನಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ. ಆಕೆ ಬೆಳಿಗ್ಗೆ 5.30 ರಿಂದ 7.30 ರ ಮಧ್ಯ ಅವಧಿಯಲ್ಲಿ ಮನೆಯಿಂದ ಹೊರಹೋದವಳು ವಾಪಾಸು ಮನೆಗೆ ಬಂದಿಲ್ಲ ಎಂದೂ ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment