ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ "ಗೋವಿಗಾಗಿ ಮೇವು" ಅಭಿಯಾನದ ಪ್ರಯುಕ್ತ ಭಾನುವಾರ ಉಜಿರೆ ಗ್ರಾಮದ ಪಡುವೆಟ್ಟು ಬೈಲಿನಲ್ಲಿ 'ನೇಜಿನಾಟಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ನೇಜಿನಾಟಿ ಕಾರ್ಯಕ್ರಮವನ್ನು ಪಡುವೆಟ್ಟು ಬೈಲಿನ ಯಜಮಾನ ವಿಜಯ ರಾಘವ ಪಡ್ವೇಟ್ನಾಯ ಕಲ್ಪವೃಕ್ಷದ ಸಿರಿ ಅರಳಿಸಿ ಉದ್ಘಾಟಿಸಿದರು.
ಉದ್ಘಾಟನಾ ಬಳಿಕ ಎರಡು ಗದ್ದೆಯಲ್ಲಿ ನಿಧಿ ಹುಡುಕುವ ಸ್ಪರ್ಧೆ , ಹಗ್ಗ ಜಗ್ಗಾಟ ಸ್ವರ್ಧೆ, ಮಡಕೆ ಓಡೆಯುವ ಸ್ವರ್ಧೆ , ಸ್ನೇಹಿತನ ಎತ್ತಿಕೊಂಡು 100 ಮೀಟರ್ ಓಟ ವಿವಿಧ ರೀತಿಯ ಮನೋರಂಜನಾತ್ಮಕ ಸ್ವರ್ಧೆಯನ್ನು ನಡೆಸಿ ಯುವಕರಿಗೆ ಉತ್ಸಾಹ ಮೂಡಿಸಲಾಯಿತು, ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಜಯ ರಾಘವ ಪಡ್ವೆಟ್ನಾಯ ,ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ , ಕಾರ್ಯದರ್ಶಿ ಅಬುಬಕ್ಕರ್ , ನ್ಯಾಯವಾದಿ ಮನೋರಮಾ ಭಟ್ ,ನ್ಯಾಯವಾದಿ ಬಿ.ಕೆ ಧನಂಜಯ್ ರಾವ್, ವಂದನಾ ಶರತ್ ಕೃಷ್ಣ ಪಡ್ವೆಟ್ನಾಯ, ಬದುಕು ಕಟ್ಟೋಣ ಬನ್ನಿ ತಂಡ ಸಂಚಾಲಕ, ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ,ಸುರಕ್ಷಾ ಮೇಡಿಕಲ್ ಮಾಲಕ ಶ್ರೀಧರ್.ಕೆ.ವಿ,
ಉದ್ಯಮಿ ಜಯಪ್ರಕಾಶ್ ಶೆಟ್ಟಿ , ಉದ್ಯಮಿ ರವಿಚಂದ್ರ ಚಕ್ಕಿತ್ತಾಯ, ಪ್ರಕಾಶ್ ಗೌಡ, ಕಲ್ಮಂಜ ಗ್ರಾ.ಪಂ ಅಧ್ಯಕ್ಷ ಶ್ರೀಧರ್ ಮಾಡಿವಾಳ, ಯೊಗೀಶ್ ಕೊಳಪ್ಪಲ, ಶ್ರೀಧರ್ ಗೌಡ ಮರಕಡ, ಶಶಿಧರ್.ಎಮ್.ಕಲ್ಮಂಜ, ತಿಮ್ಮಯ್ಯ ನಾಯ್ಕ್, ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು ಮತ್ತು ರೋಟರಿ ಕ್ಲಬ್ ಸದಸ್ಯರು ಭಾಗಿಯಾಗಿದ್ದರು.
ಕಾರ್ಯಕ್ರಮವನ್ನು ನ್ಯಾಯವಾದಿ ಧನಂಜಯ್ ರಾವ್ ಮತ್ತು ಸತೀಶ್ ಹೊಸ್ಮಾರ್ ನಿರೂಪಿಸಿದರು.