Posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೀವ ಗೌಡ ಹೃದಯಾಘಾತದಿಂದ ಕೊನೆಯುಸಿರು

1 min read

ಬೆಳ್ತಂಗಡಿ: ಸೇವಾಪಥದಲ್ಲಿ ದೀರ್ಘ ಇತಿಹಾಸ ಹೊಂದಿರುವ ಮತ್ತು ಈ ಹಿಂದೆ ಲಯನ್ಸ್  ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದ್ದ ಪ್ರತಿಷ್ಠಿತ ಬೆಳ್ತಂಗಡಿ ಲಯನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷರಾಗಿದ್ದ ಲ.‌ರಾಜೀವ ಡಿ‌ ಗೌಡ ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಜುಲೈ 21 ರಂದು ಬೆಳ್ತಂಗಡಿ ವಾಣಿ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಅವರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಲಯನ್ಸ್ ಜಿಲ್ಲೆಯ ದ್ವಿತೀಯ ಉಪರಾಜ್ಯಪಾಲ  ಡಾ. ಮೆಲ್ವಿನ್ ಅವರ ಉಪಸ್ಥಿತಿಯಲ್ಲಿ ಪದಗ್ರಹಣಗೊಂಡಿದ್ದರು.

ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಅವರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. 

ಅತ್ಯುತ್ತಮ ಕೃಷಿಕರೂ ಆಗಿದ್ದ ಅವರು ಶ್ರಮಜೀವಿಯಾಗಿ ಮಾದರಿಯಾಗಿದ್ದರು. 

ಇಂದು ಮನೆಯಲ್ಲಿ‌ದ್ದ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತು.‌ ತಕ್ಷಣ ಅವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿಸಿದ ವೈದ್ಯರು ಶೀಘ್ರದಲ್ಲೇ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಂತೆ ಸಲಹೆ‌ನೀಡಿದ್ದು, ಆಗಲೇ ಹಮೀದ್ ಅವರ ಆರೋಗ್ಯ ರಕ್ಷಾ ಅಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು

ಆದರೆ ಅವರು ನಿಧನರಾದರು.

ಅವರ ಪಾರ್ಥಿವ ಶರೀರವನ್ನು ಇದೀಗ ಅವರ ಮನೆ ಧರ್ಮಸ್ಥಳಕ್ಕೆ ತರಲಾಗುತ್ತಿದ್ದು, ರಾತ್ರಿ ಒಂಬತ್ತು ಗಂಟೆಗೆ ಪಾರ್ಥಿವ ಶರೀರ ಮನೆಗೆ ತಲುಪಲಿದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿರುತ್ತಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment