ಮಂಗಳವಾರ ಶಿಲಾನ್ಯಾಸ, ಲೇಪ್ಟಾಪ್ ಹಸ್ತಾಂತರ
ಬೆಳ್ತಂಗಡಿ: ಬೆಂಗಳೂರಿನ ಇಂಟರ್ನ್ಯಾಷನಲ್ ಟ್ರೈಪಾತ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಬೆಂಗಳೂರು ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಸವಣಾಲು ಶ್ರೀ ಲಕ್ಷ್ಮೀ ನಾರಾಯಣ ಎಜ್ಯುಕೇಶನ್ ಸೊಸೈಟಿ ಇದರ ಆಡಳಿತದಲ್ಲಿ ನಡೆಸಲ್ಪಡುತ್ತಿರುವ ಅನುದಾನಿತ ಹಿ.ಪ್ರಾ ಶಾಲೆ ಸವಣಾಲು ಇಲ್ಲಿಗೆ 5 ಲಕ್ಷ ರೂ.ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಿಸಲು ತೀರ್ಮಾನಿಸಿದ್ದ ಮಂಗಳವಾರ ಶಿಲಾನ್ಯಾಸ ನಡೆಯಿತು.
ಸಂಸ್ಥೆಯ 6 ಮಂದಿ ನಿರ್ದೇಶಕರಲ್ಲಿ ಓರ್ವರಾದ ಸವಣಾಲಿನ ಅಳಿಯ ಹಾಜಿ ಅಬ್ಬಾಸ್ ಖಾನ್, ಅವರ ಪತ್ನಿ , ಶಾಲಾ ಪೂರ್ವ ವಿದ್ಯಾರ್ಥಿನಿ ಜಮೀಲಾ ಮಂಜದಬೆಟ್ಟು ಮತ್ತು ತಾಯಿ ರಹ್ಮತುನ್ನಿಸಾ ಅವರು ಶಿಲಾನ್ಯಾಸ ನಡೆಸಿದರು.
ಈ ಸಂದರ್ಭ ಶಾಲಾ ಸಮಿತಿ ಅಧ್ಯಕ್ಷ ರಘುರಾಮ ಗಾಂಭೀರ ಅವರು ಕೊಡುಗೆ ನೀಡುತ್ತಿರುವವರನ್ನು ಶಾಲುಹೊದಿಸಿ ಗೌರವಿಸಿದರು. ಉಪಾಧ್ಯಕ್ಷ ಕೊರಗಪ್ಪ ಪೂಜಾರಿ, ಸದಸ್ಯರಾದ ಸುಬ್ರಹ್ಮಣ್ಯ ಭ್ ಎಸ್.ಜಿ, ವಾಣಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಪ್ಪ ಗೌಡ, ಪ್ರಭಾಕರ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷ ಕೇಶವ ನಾಯ್ಕ, ದಯಾನಂದ ಗೌಡ, ಗ್ರಾ.ಪಂ ಸದಸ್ಯ ಲೋಕನಾಥ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ರೈ, ಕಾರ್ಯದರ್ಶಿ ಕೂಸಪ್ಪ ಗೌಡ, ರಾಜೇಶ್ ಭಟ್, ಜಯಾನಂದ ಪಿಲಿಕಲ, ಬದ್ರಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಡಿ, ಇಸುಬು, ಗಣೇಶ್ ಭಂಡಾರಿ, ರಾಕೇಶ್ ಭಟ್, ಸತೀಶ್ ಶೆಟ್ಟಿ, ಎನ್ ಅಬ್ದುಲ್ ರಹಿಮಾನ್, ಇಂಜಿನಿಯರ್ ಗಂಗಾಧರ, ಸಹಶಿಕ್ಷಿಕಿ ಮಹಾಲಕ್ಷ್ಮಿ, ಗೌರವ ಶಿಕ್ಷಕರಾದ ಹೇಮಣ್ಣ, ಸೌಮ್ಯಾ ಮತ್ತು ನಿಶ್ಮಿತಾ, ದಾನಿ ಅಬ್ಬಾಸ್ ಖಾನ್ ಅವರ ಮಕ್ಕಳಾದ ಹರ್ಷಿಯಾ, ಹುಸೈನ್ ಮತ್ತು ಹಸನ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ ಜಿ ಪ್ರಸ್ತಾವನೆಗೈದು ಸ್ವಾಗತಿಸಿದರು.
+++++++
70 ವರ್ಷಗಳ ಇತಿಹಾಸವಿರುವ ಸವಣಾಲು ಅನುದಾನಿತ ಹಿ.ಪ್ರಾ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದ್ದು, ಪ್ರಸ್ತುತ 82 ಮಕ್ಕಳು ಹಾಜರಾತಿಇದ್ದಾರೆ.
---
ನನ್ನ ಪತ್ನಿ ಜೆಮೀಲಾ ಈ ಶಾಲಾ ಪೂರ್ವ ವಿದ್ಯಾರ್ಥಿನಿ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಕಡೆಯಿಂದ ಈ ಕೊಡುಗೆಯನ್ನು ನಮಗೆ ತಿಳಿದಿರುವ ಇದೇ ಊರಿಗೆ ಕೊಡುವ ಬಗ್ಗೆ ನಮ್ಮ ಕಂಪೆನಿಯ 6 ಮಂದಿ ನಿರ್ದೇಶಕರು ಸಂಕಲ್ಪಿಸಿದ್ದೇವೆ. ಕಟ್ಟಡ ಪೂರ್ಣಗೊಂಡ ಬಳಿಕ 1ಲಕ್ಷ ರೂ .ವೆಚ್ಚದಲ್ಲಿ ಪೂರ್ಣ ಪೀಠೋಪಕರಣಗಳನ್ನೂ ಒದಗಿಸಲಿದ್ದೇವೆ. ಈ ದಿನ ಒಂದು ಲೇಪ್‌ಟಾಪ್ ಅನ್ನು ಕೊಡುತ್ತಿದ್ದೇವೆ.
ಹಾಜಿ ಅಬ್ಬಾಸ್ ಖಾನ್, ನಿರ್ದೇಶಕರು, ಟ್ರೈಪಾತ್ ಲಾಜಿಸ್ಟಿಕ್ ಪ್ರೈ. ಲಿ ಬೆಂಗಳೂರು.