ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಶ್ರೀ ಶಾರದ ಜುವೆಲ್ಲರ್ಸ್ ನ ಗೋಡೆಗೆ ಕನ್ನ ಕೊರೆದು ಕಳವಿಗೆ ಯತ್ನ ನಡೆಸಿದ ಘಟನೆ. ಜುಲೈ .9ರಂದು ರಾತ್ರಿ ಸಂಭವಿಸಿದೆ.
ಪಕ್ಕದ ಮಳಿಗೆಗೆ ನುಗ್ಗಿ ಅಲ್ಲಿಂದ ಇನ್ನೊಂದು ಮಳಿಗೆಗೆ ನುಗ್ಗಿ ಅಲ್ಲಿಂದ ಜ್ಯುವೆಲ್ಲರಿಯ ಗೋಡೆಗೆ ಕನ್ನ ಕೊರೆದು ಯತ್ನ ನಡೆದಿದೆ.
ಕಳ್ಳರು ಆರಂಭದಲ್ಲಿ ಸಂಜೀವ ಅವರ ಮಾಲಕತ್ವದ ಶ್ರೀ ಧನ್ವಂತರಿ ಜೌಷಧಾಯದ ಶೆಟರ್‌ನ್ನು ಕಬ್ಬಿಣದ ರಾಡ್‌ನಿಂದ ಮುರಿದು ಒಳ ನುಗ್ಗಿ, ಜೌಷಧಾಲಯದ ಮಣ್ಣಿನ ಗೋಡೆಯನ್ನು ಕೊರೆದು ಸಮೀಪದ ವಾಮನ ಬೆಂಡೆಯವರ
ಮಾಲಕತ್ವದ ಶ್ರೀನಿಧಿ ಸ್ಟೋರ್ ಎಸ್‌ನ ಗೋದಾಮಿಗೆ ಪ್ರವೇಶಿದ್ದಾರೆ. ಅಲ್ಲಿಂದ ಶ್ರೀ ಶಾರದ ಜುವೆಲ್ಲರ್ಸ್ ಗೆ ನುಗ್ಗಲು ಯತ್ನಿಸಿದ್ದಾರೆ.
ಆದರೆ ಜ್ಯುವೆಲ್ಲರಿ ಮಾಲಕರು ಮೇಲ್ಛಾವಣಿ ಹಾಗೂ ತಮ್ಮ ಗೋಡೆಗೆ ಕಬ್ಬಿಣದ ರಕ್ಷಣಾತ್ಮಕ ವ್ಯವಸ್ಥೆ ಅಳವಡಿಸಿದ್ದರಿಂದ ಕಳ್ಳರಿಗೆ ಗೋಡೆಯನ್ನು ಕೊರೆಯಲು ಸಾಧ್ಯವಾಗಿಲ್ಲ ಎಂದು ಮಾಹಿತಿ ಸಿಕ್ಕಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರ ತಂಡ ಸ್ಥಳಕ್ಕೆ ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.