ಬೆಳ್ತಂಗಡಿ; ಫೇಸ್‌ಬುಕ್ ಮೂಲಕ ಪರಿಚಯವಾದ ಕೇರಳದ ಅರುಣ್ ತಂಗಚ್ಚನ್ ಮುಂಡಾಜೆ ಗ್ರಾಮದ ಗೃಹಿಣಿಯೊಬ್ಬರನ್ನು ವಾಹನದಲ್ಲಿ ಬಂದು ಕರೆದುಕೊಂಡುಹೋದ ಬೆನ್ನಿಗೆ ಆತನ ನೈಜ ಪತ್ನಿ ಅತ್ತ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮತ್ತೊಂದು ಪೊಲೀಸ್ ದೂರು ನೀಡಿದ್ದಾಳೆ.
ತನ್ನ ಪತಿ ತನ್ನನ್ನು ಮತ್ತು ಒಂಭತ್ತು ವರ್ಷ ಪ್ರಾಯದ ಮಗಳನ್ನು ತವರು ಮನೆಯಲ್ಲಿ ಬಿಟ್ಟುಹೋಗಿದ್ದು ಇದೀಗ ಮತ್ತೊಬ್ಬಾಕೆಯ ಜೊತೆ ಓಡಿಹೋಗಿ ನಮಗೆ ಅನ್ಯಾಯಮಾಡಿದ್ದಾನೆ ಎಂದು ದೂರಿದ್ದಾರೆ.
ಮುಂಡಾಜೆ ಗ್ರಾಮದ ಅಗರಿ ನಿವಾಸಿ ತೋಮಸ್ ಪಿ.ಡಿ ಅವರ ಪತ್ನಿ ನೀನು ಒ.ಎಸ್ (24ವ.) ಅವರನ್ನು ಮತ್ತು ಅವರು ಮೂರು ವರ್ಷದ ಹೆಣ್ಣು ಮಗು ಇವನಾ ಮರಿಯಾ ತೋಮಸ್ ಜು.4 ರಂದು ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಪತಿ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಆದರೆ ಇದೀಗ ಸತ್ಯ ವಿಚಾರ ಹೊರಬಿದ್ದಿದ್ದು, ಪ್ರಿಯಕರ ಅರುಣ್ ತಂಗಚ್ಚನ್ ಆಕೆಯನ್ನು ತನ್ನ ವಾಹನದಲ್ಲೇ ಕರೆದುಕೊಂಡುಹೋಗಿದ್ದಾನೆ ಎಂದು ಖಚಿತಗೊಂಡಿದೆ.
ನೀನು ಮತ್ತು ಅರುಣ್ ಫೇಸ್‌ಬುಕ್ ಮೂಲಕ ಪರಿಚಯಕ್ಕೆ ಬಂದು ಆಗಾಗ ಕೇರಳದ ಊರಿಗೆ ಹೋದಾಗ ಆತನ ಜೊತೆ ಆಕೆ ಒಂದಾಗುತ್ತಿದ್ದಳು. ಈ ಅಕ್ರಮ ಸಂಬಂಧದ ಬಗ್ಗೆ ಪತಿ ತೋಮಸ್ ಅವರಿಗೆ ತಿಳಿದು ಅನೇಕ ಬಾರಿ ಆಕೆಗೆ ಬುದ್ದಿಮಾತು ಹೇಳಿದ್ದರು. ಮನೆಯವರಿಗೆ, ಹಿರಿಯರಿಗೆ ಧರ್ಮಗುರುಗಳಿಗೆಲ್ಲಾ ವಿಚಾರ ತಿಳಿಸಿ ಆಕೆಯನ್ನು ಸರಿಪಡಿಸಲು ಅನೇಕ ಪ್ರಯತ್ನಗಳನ್ನು ಮಾಡಿದ್ದರು. ಈ ಮಧ್ಯೆ ಆಕೆ ಇದ್ದಕ್ಕಿದ್ದಂತೆ ಏಕಾಏಕಿ ಮನೆಬಿಟ್ಟು ಪ್ರಿಯಕರನ ಜೊತೆಯೇ ತಲೆಮರೆಸಿಕೊಂಡಿದ್ದಾಳೆ.
ಆತನಿಗೂ ಒಂಭತ್ತು ವರ್ಷದ ಹೆಣ್ಣು ಮಗು ಇದೆ;
ನೀನು ಅವಳನ್ನು ಕರೆದುಕೊಂಡು ಹೋದ ಅರುಣ್ ನಿಗೆ ಪತ್ನಿ ಮತ್ತು ಒಂಭತ್ತು ವರ್ಷದ ಹೆಣ್ಣು ಮಗು ಇದೆ. ಈಕೆಯ ಜೊತೆ ಅಕ್ರಮಸಂಪರ್ಕ ಏರ್ಪಟ್ಟಿರುವ ಬಗ್ಗೆ ನೈಜ ಪತ್ನಿಗೂ ವಿಚಾರ ತಿಳಿದು ಅನೇಕ ಬಾರಿ ಜಗಳವೂ ನಡೆದಿದೆ. ಇದೀಗ ಆತ ನೈಜ ಪತ್ನಿ ಮತ್ತು ಮಗಳನ್ನು ಆಕೆಯ ತವರು ಮನೆಯಲ್ಲಿ ಬಿಟ್ಟು ಬಂದಿದ್ದು, ಆಕೆ ಈ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ನೀನು ಅವರ ಪತಿ ತೋಮಸ್ ಅವರು, ನನ್ನ ಪತ್ನಿ- ಮಗು ನಾಪತ್ತೆಯಾಗಿದ್ದು, ಆಕೆಗೆ ಅಕ್ರಮ ಸಂಬಂಧವಿತ್ತು. ಆತನ ಜೊತೆಗೇ ಆಕೆ ಆಕೆ ತೆರಳಿರುವ ಸಾಧ್ಯತೆ ಇದೆ ಎಂದು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ನಾಪತ್ತೆ ಪ್ರಕರಣ ಮಾತ್ರ ದಾಖಲಿಸಿಕೊಂಡಿದ್ದಾರೆ. ಇದೀಗ ನೀನು ಒ.ಎಸ್ ಯಾವುದೇ ಕರೆ ಸ್ವೀಕರಿಸುತ್ತಿಲ್ಲ. ಆಕೆಯನ್ನು ಕರೆದುಕೊಂಡು ಹೋದ ಅರುಣ್ ಮೇಲೆ ಆತನ ಪತ್ನಿ ಅಲ್ಲಿಯ ಠಾಣೆಗೂ ದೂರು ನೀಡಿದ್ದರಿಂದ ಸದ್ಯ ಆತ ಅಲ್ಲಿಂದಲೂ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.