ಬೆಳ್ತಂಗಡಿ; ಕಾಜೂರಿನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಹಿಳಾ ನಮಾಝ್ ಕೊಠಡಿ ಹಾಗೂ ವಿಶ್ರಾಂತಿ ಭವನ ನಿರ್ಮಾಣಕ್ಕೆ ವಿಧಾನ ಪರಿಷತ್ ಶಾಸಕ ಹಾಜಿ ಬಿ.ಎಮ್ ಫಾರೂಕ್ ಫೆ.26 ರಂದು ಶಿಲಾನ್ಯಾಸ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿದರು.
ಕಾಜೂರು ಶಿಕ್ಷಣ ಸಂಸ್ಥೆಗಳ ಪ್ರಚಾರ್ಯ ಸಯ್ಯಿದ್ ಕೆಪಿಎಸ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ವಹಿಸಿದ್ದರು.
ವೇದಿಕೆಯಲ್ಲಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಉದ್ಯಮಿಗಳಾದ ಸಮದ್ ಸೋಂಪಾಡಿ, ಯು.ಹೆಚ್ ಅಬ್ದುಲ್ ಖಾದರ್, ಬಿ.ಎಮ್ ಶೌಕತ್ ಅಲಿ ಕೃಷ್ಣಾಪುರ, ಶರೀಫ್ ಕೃಷ್ಣಾಪುರ ಭಾಗಿಯಾಗಿದ್ದರು.
ವೇದಿಕೆಯಲ್ಲಿ ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷ ಹಾಜಿ ಬಿ.ಹೆಚ್ ಅಬೂಬಕ್ಕರ್ ಹಾಜಿ, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಮಾಜಿ ಅಧ್ಯಕ್ಷರುಗಳಾದ ಉಮರ್ ಸಖಾಫಿ, ಶೇಕಬ್ಬ ಕುಕ್ಕಾವು, ಪಿ.ಎ ಮುಹಮ್ಮದ್, ಮುಹಮ್ಮದ್ ಸಖಾಫಿ, ಇಬ್ರಾಹಿಂ ಮದನಿ, ಯೂಸುಫ್ ಶರೀಫ್, ಕಿಲ್ಲೂರು ಜಮಾಅತ್ ಮಾಜಿ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ, ಅಬೂಬಕ್ಕರ್ ಮಲ್ಲಿಗೆಮನೆ ಮೊದಲಾದವರು ಉಪಸ್ಥಿತರಿದ್ದರು.
ಸನ್ಮಾನ; ಪುರಸ್ಕಾರ;
ಸಮಾರಂಭದಲ್ಲಿ ಫೆ. 19 ಎಂದು ನಡೆದ ಸರಳ ಸಾಮೂಹಿಕ ವಿವಾಹ ಮತ್ತು ರಾಜ್ಯ ಮಟ್ಟದ ದಫ್ಫ್ ಸ್ಪರ್ಧೆ ಯಶಸ್ವಿಯಾಗಿ ಸಂಘಟಿಸಿದ ರಿಫಾಯಿಯಾ ದಫ್ಫ್ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್, ಪ್ರ. ಕಾರ್ಯದರ್ಶಿ ಉಮರುಲ್ ಅಶ್ಪಾಕ್, ಕೋಶಾಧಿಕಾರಿ ಮುಸ್ತಫಾ, ಕೆಡಿಸಿ ಸೌದಿ ಅರೇಬಿಯಾ ಸಮಿತಿ ಅಧ್ಯಕ್ಷ ಜೆ.ಹೆಚ್ ಹಾರಿಸ್, ದಫ್ಫ್ ತರಬೇತುದಾರರೂ ಆಗಿರುವ ರಾಜ್ಯ ದಫ್ಫ್ ಕಲಾ ಒಕ್ಕೂಟದ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಆರ್ಲಪದವು, ಸಹಕಾರ ನೀಡಿದ ಕೆ.ಎಮ್ ಅಬೂಬಕ್ಕರ್ ಕುಕ್ಕಾವು ಅವರನ್ನು ಸನ್ಮಾನಿಸಲಾಯಿತು. ದಫ್ಫ್‌ನ ಎಲ್ಲಾ ವಿದ್ಯಾರ್ಥಿಗಳನ್ನೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು.