ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮಕ್ಕೆ ಫೆ.27 ರಂದು ರಾತ್ರಿ ಸಯ್ಯಿದ್ ಕುಂಬೋಳ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ತೆರೆಬಿದ್ದಿದೆ.
ಮಧ್ಯಾ ರಾತ್ರಿಯಿಂದಲೇ ಆರಂಭವಾದ ಸಾರ್ವಜನಿಕ ಮಹಾ ಅನ್ನದಾನವು ಫೆ.28 ರಂದು ರಾತ್ರಿವರೆಗೂ ನಡೆದು ಸಹಸ್ರಾರು ಮಂದಿ ಭಾಗಿಯಾದರು.ಸಮಾರೋಪ ಸಮಾರಂಭದಲ್ಲಿ ಡಾ. ಕಾವಳಕಟ್ಟೆ ಹಝ್ರತ್ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಕೊಡುಗು ಜಿಲ್ಲಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಹೈದ್ರೋಸಿ ತಂಙಳ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು. ಸಯ್ಯಿದ್ ಕಾಜೂರು ತಂಙಳ್ ಮೌಲೀದ್ ಪಾರಾಯಣ ನಡೆಸಿ ಅನ್ನದಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರ.ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಉಪಾಧ್ಯಕ್ಷ ಹಾಜಿ ಬಿ.ಹೆಚ್ ಅಬೂಬಕ್ಕರ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಅಬ್ದುಶ್ಶುಕೂರ್ ಉಜಿರೆ, ವಝೀರ್ ಬಂಗಾಡಿ ಸಹಿತ ಪದಾಧಿಕಾರಿಗಳು ಭಾಗಿಯಾಗಿದ್ದರು. ಉರೂಸ್ ಪ್ರಯುಕ್ತ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.