ಬೆಳ್ತಂಗಡಿ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ನೈನಾಡು ಎಂಬಲ್ಲಿಂದ ಜಾನ್ ಫೆರ್ನಾಂಡಿಸ್(58ವ.) ಎಂಬವರು ಜು. 16ರಿಂದ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ.
ವಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿರುವ ಅವರು 3 ತಿಂಗಳ ಹಿಂದೆ ಜಮೀನನ್ನು ಮಾರಾಟ ಮಾಡಿ ನೈನಾಡಿನಲ್ಲಿ ನೆಲೆಸಿದ್ದರು. ಘಟನೆಯ ದಿನ ಅವರು ಬೆಳಿಗ್ಗೆ 6 ಗಂಟೆಗೆ ಮೊಬೈಲ್ ಚಾರ್ಚ್ ಮಾಡಲೆಂದು ಮನೆಯ ಸಮೀಪವೇ ಇರುವ ಚಿಕ್ಕಪ್ಪ ಅಲೆಕ್ಸ್ ಅವರ ಮನೆಗೆ ಹೋಗಿಬರುವದಾಗಿ ತಿಳಿಸಿ ತೆರಳಿದವರು ವಾಪಾಸಾಗದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.