Posts

ಜಿ.ಪಂ- ಚುನಾವಣಾ ಮೀಸಲಾತಿಯಲ್ಲಿ‌ ಎಸ್.ಸಿ- ಎಸ್.ಎಸ್ಟಿ ಸ್ಥಾನ ವಂಚನೆ.. ಶೀಘ್ರ ಸರಿಪಡಿಸಲು ಕಾಂಗ್ರೆಸ್ ಪಕ್ಷದಿಂದ ಒತ್ತಾಯ;

2 min read


ಶೀಘ್ರ ಸರಿಪಡಿಸಲು ಕಾಂಗ್ರೆಸ್ ಪಕ್ಷದಿಂದ ಒತ್ತಾಯ;


ಬೆಳ್ತಂಗಡಿ; ಇತ್ತೀಚಿಗೆ  ಸರಕಾರ ಘೋಷಿಸಿರುವ ಜಿಲ್ಲಾ ಪಂಚಾಯತ್ ಮತ್ತು ತಾ.ಪಂ ಚುನಾವಣಾ ಮೀಸಲಾತಿ ತೀರಾ ಅವೈಜ್ಞಾನಿಕವಾಗಿದ್ದು ಇದರಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ನೇರವಾಗಿ ಶಾಮೀಲಾಗಿದ್ದಾರೆ. ಮೀಸಲಾತಿಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಂಬಂಧಪಟ್ಟ ಅಧಿಕಾರಿಗಳು ಅವರ ಅಣತಿಯಂತೆ ಮೀಸಲಾತಿ ಪಟ್ಟಿ ತಯಾರಿಸಿರುವುದು ಕಂಡು ಬರುತ್ತದೆ. ಬೆಳ್ತಂಗಡಿಯ ಇತಿಹಾಸದಲ್ಲೇ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪ.ಜಾತಿ ಮತ್ತು ಪ.ಪಂಗಡಕ್ಕೆ ಒಂದೇ ಒಂದು ಕ್ಷೇತ್ರವನ್ನು ಮೀಸಲು ಮಾಡದೆ ಇರುವುದು ಆ ಸಮುದಾಯಗಳಿಗೆ ಶಾಸಕರು ಮಾಡಿದ ದ್ರೋಹವಾಗಿದ್ದು ಇದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.


ಗುರುನಾರಾಯಣ ಸಂಕೀರ್ಣದ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಅನ್ಯಾಯ ಮಾಡಿರುವುದು ಸಂವಿಧಾನದ ಅನುಚ್ಛೇದ 343 ( ಡಿ ) ಉಲ್ಲಂಘನೆಯಾಗಿದೆ. ಬೆಳ್ತಂಗಡಿಯಲ್ಲಿ ಪ.ಜಾತಿ ಮತ್ತು ಪ.ಪಂಗಡದ ಒಟ್ಟು ಜನಸಂಖ್ಯೆ 40,958 ಇದ್ದರೂ ಇದೇ ಪ್ರಥಮ ಬಾರಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪ . ಜಾತಿ ಮತ್ತು ಪ . ಪಂಗಡದವರಿಗೆ ಮೀಸಲಾತಿ ನೀಡಲಾಗಿಲ್ಲ . ತಾಲೂಕಿನ ಕೆಲವೊಂದು ಕಡೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತಿ  ಕ್ಷೇತ್ರವನ್ನು ಸಾಮಾನ್ಯ ಮಹಿಳೆಯರಿಗೆ ಮೀಸಲಿರಿಸಲಾಗಿದೆ . ಧರ್ಮಸ್ಥಳ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಈ ಹಿಂದೆ ಕೂಡ ಹಿಂದುಳಿದ ವರ್ಗ ( ಎ ) ಮೀಸಲಾತಿ ಇದ್ದು ಈ ಭಾರಿ ಪುನಃ ಅದೇ ಮೀಸಲಾತಿ ಪುನರಾವರ್ತನೆಯಾಗಿರುತ್ತದೆ . ತಾಲೂಕಿನ ಲೆಖ್ಯಾ, ತೋಟತ್ತಾಡಿ , ಚಿಬಿದ್ರೆ ಗ್ರಾಮಗಳನ್ನು ಯಾವ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮೀಸಲಿರಿಸಿದ್ದಾರೆ ಎಂಬ ವಿವರಣೆ ಮಿಸಲಾತಿ ಪಟ್ಟಿಯಲ್ಲಿ ಇಲ್ಲ ಎಂದು ಆಕ್ಷೇಪಿಸಿದರು.

ತೈಲ ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾ;.

ತೈಲ ಬೆಲೆ ಏರಿಕೆ ವಿರುದ್ಧ ಉಜಿರೆಯ ಪಿ.ಸಿ.ಪೈ ಪೆಟ್ರೋಲ್ ಬಂಕ್ ಬಳಿಯಿಂದ ಬೆಳ್ತಂಗಡಿಯ ಹಳೆಕೋಟೆಯ ಮಹಾವೀರ ಸರ್ವೀಸ್ ಸ್ಟೇಷನ್ ವರೆಗೆ ಸೈಕಲ್ ಜಾಥಾ ಜು.7 ರಂದು ಬುಧವಾರ ಪಕ್ಷದ ವತಿಯಿಂದ ಆಯೋಜಿಸಲಾಗಿದೆ. ಎರಡೂ ಬ್ಲಾಕ್ ಕಾಂಗ್ರೆಸ್ ಘಟಕಗಳ ವತಿಯಿಂದ ಆಯೋಜನೆಯಾಗಿರುವ ಈ ಜಾಥಾದ ಜೊತೆಗೆ ಪಾದಯಾತ್ರೆ ಕೂಡ ನಡೆಯಲಿದೆ.

ಜಾಥಾದ ನೇತ್ರತ್ವವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್,  ಮಾಜಿ ಸಚಿವ ಗಂಗಾಧರ ಗೌಡ ವಹಿಸಲಿದ್ದಾರೆ ಎಂದರು.

ಜುಲೈ 11 ರಂದು ಬೆಳ್ತಂಗಡಿಯಲ್ಲಿ ಬೃಹತ್ ರಕ್ತದಾನ‌ ಶಿಬಿರ;

ಕೋವಿಡ್ ಕಾಲಘಟ್ಟದಲ್ಲಿ ರಾಜ್ಯದಲ್ಲಿ ರಕ್ತದ ಕೊರತೆ ಇದ್ದು, ಇದನ್ನು ಮನಗಂಡು ಜು.11 ರಂದು ಬೆಳ್ತಂಗಡಿಯ ಗುರುನಾರಾಯಣ ಸಭಾಂಗಣದಲ್ಲಿ ಪಕ್ಷದ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ವೆನ್ಲಾಕ್ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕ ಮತ್ತು ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಶಿಬಿರ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಎಸ್‌ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ, ಮಾಜಿ ಅಧ್ಯಕ್ಷ ಚಂದು ಎಲ್ ಪೂರಕ ಮಾಹಿತಿ ನೀಡಿದರು.

ಪಕ್ಷದ ವಕ್ತಾರ ಮನೋಹರ್ ಕುಮಾರ್ ಇಳಂತಿಲ(ನಗರ), ಕೇಶವ ಪಿ ಗೌಡ(ಗ್ರಾಮೀಣ), ಎಸ್.ಸಿ‌ ಘಟಕದ ಅಧ್ಯಕ್ಷ ಬಿ.ಕೆ ವಸಂತ, ಮಾಲಾಡಿ‌ ಗ್ರಾ.ಪಂ ಸದಸ್ಯ ಬೇಬಿ ಸುವರ್ಣ, ಜಿಲ್ಲಾ ಕಾಂಗ್ರೆಸ್ ಸದಸ್ಯ ಪ್ರಭಾಕರ ಶಾಂತಿಕೋಡಿ, ಎಸ್‌ಸಿ ಘಟಕ ಗ್ರಾಮೀಣದ ಅಧ್ಯಕ್ಷ ರವಿ ನೇತ್ರಾವತಿ ನಗರ ಮೊದಲಾದವರು ಉಪಸ್ಥಿತರಿದ್ದರು

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment