ಬೆಳ್ತಂಗಡಿ: ತಾಲೂಕಿನ ಮಾಜಿ ಶಾಸಕ ಕೆ ವಸಂತ ಬಂಗೇರರ ಕುಟುಂಬದವರು, ಇತ್ತೀಚೆಗೆ ತಾಲೂಕಿನ ಕೊರೊನಾ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಾಗ್ರಿಗಳ ನೆರವು ನೀಡುತ್ತಿದ್ದು, ಗುರುವಾರ ತಾಲೂಕಿನ ನಾರಾವಿ ಹಾಗೂ ಕುತ್ಲೂರು ಭಾಗದಲ್ಲಿ ವಿತರಿಸಲಾಯಿತು.
ಕ್ವಾರಂಟೈನ್ ನಲ್ಲಿರುವ ಅಶಕ್ತರಿಗೂ ನೆರವು ನೀಡಲಾಯಿತು.
ಮಾಜಿ ಶಾಸಕ ವಸಂತ ಬಂಗೇರರ ಪುತ್ರಿ ಪ್ರೀತಿತಾ ಬಂಗೇರ, ಬಿನುತಾ ಬಂಗೇರ, ಯುವ ಇಂಟಕ್ ತಾಲೂಕು ಅಧ್ಯಕ್ಷ ಅನೂಪ್ ಬಂಗೇರ ಇವರು ಫಲಾನುಭವಿಗಳಿಗೆ ಕಿಟ್ಟ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮ ಸಮಿತಿ ನಾರಾವಿ ವಲಯ ಅಧ್ಯಕ್ಷ ದಿವಾಕರ ಭಂಡಾರಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಯಶೋದ, ಡಯಾನಾ, ಪ್ರಮೀಳಾ ರೋಡ್ರಿಗಸ್, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗ್ರಾಮಸಮಿತಿ ಅಧ್ಯಕ್ಷ ನಿತ್ಯಾನಂದ ಪೂಜಾರಿ, ಪ್ರಮುಖರಾದ ವಿಲಿಯಂ ಕೊಡ್ಜೇರೊ,ಮಮತಾ ಕೃಷ್ಣಪ್ಪ ಪೂಜಾರಿ, ಶ್ರೀಧರ ಪೂಜಾರಿ, ಶಾರದಾ ಗಣೇಶ್,ಮಲ್ಲಿಕಾ ನಿತ್ಯಾನಂದ್ ಮತ್ತಿತರರು ಉಪಸ್ಥಿತರಿದ್ದರು.